ಮದುವೆ ನಿಶ್ಚೆಯವಾಗಿದ್ದ ಬೀಗರ ಮನೆಗೆ ರಂಜಾನ್ ಅಡುಗೆ ನೀಡಿ ಬೈಕ್ ಮೇಲೆ ಮನೆ ಮರಳುವ ವೇಳೆ ಅಪರಿಚಿತ ವಾಹನ ಹಿಟ್ ಆ್ಯಂಡ್ ರನ್ ಮಾಡಿದ ಪರಿಣಾಮ ಇಬ್ಬರು ಯುವಕರು ದಾರುಣವಾಗಿ ಸಾವನಪ್ಪಿದ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಮಲ್ಲಿಗವಾಡ ಸೇತುವೆ ಮೇಲೆ ಶನಿವಾರ ಸಂಜೆ ನಡೆದಿದೆ.

ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದ ಮೂಲದ ಇಮಾಮ್ಸಾಬ್ ಹೆಬ್ಬಳ್ಳಿ (21) ಸ್ಥಳದಲ್ಲಿಯೇ ಸಾವನಪಿದ್ದು, ಮಹ್ಮದ್ಯೂನಸ್ ಮುಲ್ಲಾನವರ್(17) ಇನ್ನೋರ್ವ ಹಿಂದಿ ಸವಾರ ಚಿಕಿತ್ಸೆ ಫಲಿಸದೆ ಇಂದು ಮುಂಜಾನೆ ಅಸುನೀಗಿದ್ದಾನೆ. ಇಬ್ಬರು ಯುವಕರು ಬೈಕ್ ಮೇಲೆ ಧಾರವಾಡ ತಾಲೂಕಿನ ಕಂಬಾರಗಣವಿ ಗ್ರಾಮದ ಮೃತ ಇಮಾಮಸಾಬ್ ಬೀಗರ ಮನೆಗೆ ರಂಜಾನ್ ಅಡುಗೆ ನೀಡಲು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ತಮ್ಮ ಮನೆಗೆ ಮರಳುತ್ತಿದ್ದರು. ಈ ವೇಳೆ ಬೈಕ್ ರಭಸವಾಗಿ ಅಪರಿಚಿತ ವಾಹನ ಡಿಕ್ಕಿ ಮಾಡಿ ಪರಾರಿಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದ ಯುವಕರನ್ನು ಸ್ಥಳೀಯ ವಾಹನ ಸವಾರರು ಗಮನಿಸಿ ಪೊಲೀಸರಿಗೆ ಮಾಹಿತಿ ರವಾನಿಸಿ, ರಕ್ಷಣೆಗೆ ಮುಂದಾಗಿ ಆಸ್ಪತ್ರೆಗೆ ರವಾನಿಸಿದರು. ಡಿಕ್ಕಿ ರಭಸಕ್ಕೆ ಇಮಾಮ್ಸಾಬ್ ಸ್ಥಳದಲ್ಲಿಯೇ ಸಾವನಪ್ಪಿದ್ದನ್ನು. ಗಂಭೀರವಾಗಿ ಗಾಯಗೊಂಡ ಮಹ್ಮದಯೂನಸ್ನ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಸ್ಥಳೀಯರ ಮಾಹಿತಿ ಸ್ಥಳಕ್ಕೆ ಭೇಟಿ ನೀಡಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ಕೈಗೊಂಡು ಪ್ರಕರಣ ದಾಖಲಿಸಿಕೊಂಡು ಹಿಂಟ್ ಆ್ಯಂಡ್ ರನ್ ಮಾಎಇದ ವಾಹನ ಪತ್ತೆಗೆ ಬಲೆ ಬೀಸಿದ್ದಾರೆ.
