BELAGAVI

ಸೌಹಾರ್ದತೆ ಮತ್ತು ಅಹಿಂಸೆಯ ಜಗತ್ತು ನಿರ್ಮಾಣವಾಗಲಿ: ಸಚಿವ ಎಚ್.ಕೆ. ಪಾಟೀಲ್ ರಂಜಾನ್ ಹಾರೈಕೆ

Share

ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಅವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸುವ ಮೂಲಕ ಹಿಂಸೆ ಮುಕ್ತ ಜಗತ್ತು ನಿರ್ಮಾಣವಾಗಲಿ ಎಂದು ಅವರು ಆಶಿಸಿದ್ದಾರೆ.

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ಹಿಂಸೆಗಳಿಲ್ಲದ ಶಾಂತಿಯುತ ಜಗತ್ತನ್ನು ನಾವೆಲ್ಲರೂ ನಿರೀಕ್ಷಿಸಬೇಕು. ಅಹಿಂಸೆ ಮತ್ತು ಸೌಹಾರ್ದತೆ ನಮ್ಮ ಬದುಕಿನ ಭಾಗವಾಗಲಿ, ರಂಜಾನ್ ಹಬ್ಬವು ಎಲ್ಲೆಡೆಯೂ ಶಾಂತಿಯನ್ನು ಪಸರಿಸಲಿ” ಎಂದು ಆಶಿಸಿದರು.

ನಾಡಿನ ರೈತರು ಮತ್ತು ಸಮಸ್ತ ಶ್ರಮಜೀವಿಗಳ ಬದುಕು ಸಮೃದ್ಧಿಯಿಂದ ಕೂಡಿರಲಿ ಎಂದು ಹಾರೈಸಿದ ಅವರು, ಪ್ರತಿಯೊಬ್ಬರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿದರು. ಈ ಪವಿತ್ರ ಹಬ್ಬವು ಸಮಾಜದಲ್ಲಿ ಭ್ರಾತೃತ್ವವನ್ನು ಗಟ್ಟಿಗೊಳಿಸಲಿ ಎಂಬ ಆಶಯವನ್ನು ಸಚಿವರು ವ್ಯಕ್ತಪಡಿಸಿದರು.

Tags:

error: Content is protected !!