Accident

ಧಾರವಾಡದ ಕಲಘಟಗಿ ರಾ.ಹೆದ್ದಾರಿಯಲ್ಲಿ LPG ತುಂಬಿಕೊಂಡು ಬರುತ್ತಿದ್ದ ಟ್ಯಾಂಕರ‌ನಿಂದ ಗ್ಯಾಸ್ ಲೀಕ್….. ಸ್ಥಳಕ್ಕೆ ಕಲಘಟಗಿ ಠಾಣೆ ಪೊಲೀಸರು, ಅಗ್ನಿ ಶಾಮಕದಳದ ಸಿಬ್ಬಂದಿ ಭೇಟಿ.‌

Share

ಮೂರು ದೇಶಗಳ ಯುದ್ಧದಿಂದಾಗಿ ದೇಶದಲ್ಲಿ ಗ್ಯಾಸ್ ಅಭಾವ ಎದುರಾಗಿದ್ದು, ಇದರ ಮಧ್ಯೆ LPG ತುಂಬಿಕೊಂಡು ಬರುತ್ತಿದ್ದ ವಾಹನದಿಂದ ಅಪಾರ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿ ವಾಹನ ಸವಾರರಲ್ಲಿ ಆತಂಕ ಸೃಷ್ಟಿಯಾದ ಘಟನೆ ಧಾರವಾಡದ ಕಲಘಟಗಿಯ ರಾಷ್ಟ್ರೀಯ ಹೆದ್ದಾರಿನ ತಂಬೂರು ಕ್ರಾಸ್ ಬಳಿ‌ ನಡೆದಿದೆ.

ಕಳೆದ ದಿನ ಶುಕ್ರವಾರ ಗೂಟಿ-ಅಂಕೋಲಾ ರಸ್ತೆಯ ತಂಬೂರು ಕ್ರಾಸ್ ಮಾರ್ಗವಾಗಿ ಎಲ್ ಪಿ‌ ಜಿ ತುಂಬಿಕೊಂಡು ಬೃಹತ್ ಟ್ಯಾಂಕರ ವಾಹನ ಬರುತ್ತಿದ್ದ ವೇಳೆ, ವಾಹನದಿಂದ ಗ್ಯಾಸ್ ಸೋರಿಕೆಯಾಗುತ್ತಿದೆ.‌ ಸ್ಥಳೀಯರು ಲೀಕ್ ಆಗುತ್ತಿರುವುದನ್ನು ಗಮನಿಸಿ ವಾಹನ ಚಾಲಕನಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವಾಹನ ನಿಲ್ಲಿಸಿ ಕಲಘಟಗಿ ಪೊಲೀಸರಿಗೆ ಮಾಹಿ ನೀಡಿದ್ದು, ಸ್ಥಳಕ್ಕೆ ಅಗ್ನಿ ಶಾಮಕದಳದೊಂದಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಅಪಾರ ಪ್ರಮಾಣ ಗ್ಯಾಸ್ ಲೀಕ್‌ನಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಲಘಟಗಿ ಠಾಣೆಯ ಪೊಲೀಸರು ಕಲಘಟಗಿ ಯಲ್ಲಾಪುರ ರಸ್ತೆ ಮಾರ್ಗ ಬದಲಾವಣೆ ಮಾಡಿದ್ದು, ಹುಬ್ಬಳ್ಳಿ ತಡಸ ಕ್ರಾಸ್ ಮುಂಡಗೋಡ ಮಾರ್ಗವಾಗಿ ಸಂಚರಿಸುವಂತೆ ಸೂಚನೆ ನೀಡಲಾಗಿದೆ.‌ ಜತೆಗೆ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿಗೆ ಬರುವ ವಾಹನಗಳ ಸಂಚಾರವನ್ನು, ಯಲ್ಲಾಪುರ ಹಳಿಯಾಳ ಕ್ರಾಸ್ ನಿಂದ ಧಾರವಾಡ ಹುಬ್ಬಳ್ಳಿ ಮಾರ್ಗವಾಗಿ ಬರಲು ಸೂಚಿಸಲಾಗಿದೆ. ವಾಹನಗಳ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಿರುವ ಪೊಲೀಸರು ಯಾವುದೇ ವಾಹನ ಓಡಾಟ ಸೇರಿ ಜನರ ಸಂಚಾರ ನಿರ್ಬಂಧ ಮಾಡಿದ್ದಾರೆ. ಸದ್ಯ ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಕಲಘಟಗಿ ಠಾಣೆಯ ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.‌

Tags:

error: Content is protected !!