BELAGAVI

ಬೆಳಗಾವಿ: ‘ಜೀವದಾನಕ್ಕಿಂತ ದೊಡ್ಡದಾನವಿಲ್ಲ’ – ರಾಯಣ್ಣ ಕಾಲೇಜಿನಲ್ಲಿ ರೆಡ್ ಕ್ರಾಸ್‌ನಿಂದ ಜಾಗೃತಿ ಅಭಿಯಾನ

Share

ಆಪತ್ತಿನಲ್ಲಿರುವ ಜೀವ ಉಳಿಸಲು ಪ್ರತಿಯೊಬ್ಬರಿಗೂ ಪ್ರಥಮ ಚಿಕಿತ್ಸೆಯ ಅರಿವು ಇರುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಪ್ರಥಮ ಚಿಕಿತ್ಸೆ, ರಕ್ತದಾನ, ಕ್ಯಾನ್ಸರ್ ಹಾಗೂ ಸಾಂಕ್ರಾಮಿಕ ರೋಗಗಳ ಕುರಿತು ಮಹತ್ವದ ತಿಳುವಳಿಕೆ ಕಾರ್ಯಕ್ರಮ ಜರುಗಿತು. ಮುಖ್ಯ ಉಪನ್ಯಾಸ ನೀಡಿದ ಡಾ. ದೇವೆಗೌಡರು, ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಯುವಕರು ಧೈರ್ಯದಿಂದ ಮುಂದೆ ಬಂದು ಪ್ರಥಮ ಚಿಕಿತ್ಸೆ ನೀಡುವ ಮೂಲಕ ಮರಣ ಪ್ರಮಾಣವನ್ನು ತಗ್ಗಿಸಬೇಕು ಎಂದು ಕರೆ ನೀಡಿದರು. ಗೋವಾದಲ್ಲಿ ಪ್ರಥಮ ಚಿಕಿತ್ಸೆ ಸಿಗದೆ ಮೃತಪಟ್ಟ ತಮ್ಮ ಸಂಬಂಧಿಕರ ಉದಾಹರಣೆ ನೀಡಿದ ಅವರು, ಜೀವ ಉಳಿಸುವುದಕ್ಕಿಂತ ದೊಡ್ಡ ಸೇವೆ ಯಾವುದೂ ಇಲ್ಲ ಎಂದರು. ಕಾಲೇಜಿನ ಪ್ರಾಚಾರ್ಯರಾದ ಎಸ್. ಸಿ. ಪಾಟೀಲ ಅವರು ಮಾತನಾಡಿ, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ರಕ್ತದಾನ ಮತ್ತು ಸಹಾಯದ ಮೂಲಕ ಸಮಾಜಕ್ಕೆ ಧೈರ್ಯ ತುಂಬುವ ಕೆಲಸವಾಗಲಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆಡ್ ಕ್ರಾಸ್ ಜಿಲ್ಲಾಧ್ಯಕ್ಷ ಡಾ. ವಿ. ಡಿ. ಡಾಂಗೆ ಅವರು ಸಂಸ್ಥೆಯ ಇತಿಹಾಸ ಹಾಗೂ ಪ್ರವಾಹದಂತಹ ಸಂಕಷ್ಟದ ಸಮಯದಲ್ಲಿ ಇಲಾಖೆಗಳ ಸಮನ್ವಯದೊಂದಿಗೆ ಜನರ ಆರೋಗ್ಯ ರಕ್ಷಣೆ ಮಾಡಿದ ಅನುಭವಗಳನ್ನು ಹಂಚಿಕೊಂಡರು. ರೆಡ್ ಕ್ರಾಸ್ ಅಧಿಕಾರಿ ಡಾ. ದೇವತಿ ಗಸ್ತಿ ಮಾನವೀಯತೆಯ ದೃಷ್ಟಿಯಿಂದ ಯುವಜನತೆ ಇಂತಹ ತರಬೇತಿಗಳಲ್ಲಿ ಸಕ್ರಿಯರಾಗಲು ವಿನಂತಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಅಶೋಕ ಬಾದಾಮಿ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ವಿನೋದಿನಿ ಶರ್ಮಾ, ಪ್ರವೀಣ ಹೀರೇಮಠ, ಎಸ್. ಜಿ. ಸಿದ್ನಾಳ, ಡಾ. ಡಿ. ಎನ್. ಮಿಸಾಳೆ, ಮೂಲಿಮನಿ, ಪ್ರಿಯಾಂಕಾ ಪುರಾಣಿಕ, ಕಾಲೇಜಿನ ಕಾರ್ಯಕ್ರಮ ಅಧಿಕಾರಿ ಸುಜಾತಾ ಪೈ, ಮಹಾಂತೇಶ ಹಿರೇಮಠ, ಸುನೀಲ್, ಸುನೀತಾ ಮುಡಲಗಿ, ಭುವನೇಶ್ವರಿ ಪಾಟೀಲ ಹಾಗೂ ನೀನಾ ಕಾರಜಗಿ ಉಪಸ್ಥಿತರಿದ್ದರು. ಪ್ರವೀಣ ಹೀರೇಮಠ ಕಾರ್ಯಕ್ರಮ ನಿರ್ವಹಿಸಿದರು.

Tags:

error: Content is protected !!