Chikkodi

ಯುಗಾದಿ ಹಬ್ಬಕ್ಕೆ ಇಡೀ ಗ್ರಾಮದ ಜನರಿಂದಲೇ ಕೃಷ್ಣಾನದಿಗೆ ಬಾಗಿನ ಅರ್ಪಣೆ

Share

ಯುಗಾದಿ ಹಬ್ಬದ ಅಂಗವಾಗಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಇಡೀ ಜನರು ಸೇರಿಕೊಂಡು ಅತ್ಯಂತ ಭಕ್ತಿ ಭಾವದಿಂದ ಕೃಷ್ಣಾ ನದಿಗೆ ಬಾಗಿನವನ್ನು ಅರ್ಪಣೆ ಮಾಡಿ ಸಂಪ್ರದಾಯವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.

ಗ್ರಾಮದ ಹೆಣ್ಣುಮಕ್ಕಳನ್ನು ಬೇರ ಊರುಗಳಿಗೆ ಮದುವೆ ಮಾಡಿಕೊಟ್ಟ ನಂತರ ಅವರು ತವರು ಗ್ರಾಮವಾದ ಇಂಗಳಿ ಗ್ರಾಮಕ್ಕೆ ಬಂದು ಕುಟುಂಬ ಸಮೇತವಾಗಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಬೇಕು ಎಂಬುದು ಪ್ರತೀತಿವಾಗಿದೆ.ಈ ಹಿನ್ನೆಲೆಯಲ್ಲಿ ಬೇರೆ ಬೇರೆ ಊರುಗಳಿಗೆ ಕೊಟ್ಟ ಹೆಣ್ಣುಮಕ್ಕಳು ಇಂಗಳಿ ಗ್ರಾಮಕ್ಕೆ ಆಗಮಿಸಿ ಅತ್ಯಂತ ಭಕ್ತಿಭಾವದಿಂದ ಕುಟುಂಬ ಸಮೇತವಾಗಿ ಕೃಷ್ಣಾನದಿಗೆ ಬಾಗಿನ ಅರ್ಪಿಸಿ ಭಕ್ತಿಯ ಪರಾಕಾಷ್ಠೆಯನ್ನು ತೋರಿದರು.

ಚೌಕಾಕಾರದ ಬಾಗಿನವನ್ನು ತಯಾರಿಸಿ ನಾಲ್ಕು ಮೂಲೆಗಳಲ್ಲಿ ಹೊಳಿಗೆ,ದೀಪಗಳನ್ನು ಹಾಗೂ ಬಾಗಿನದ ಮಧ್ಯದಲ್ಲಿ ಕೊಬ್ಬರಿ,ಖಾರಿಕ,ತೆಂಗಿನಕಾಯಿ,ಅಣ್ಣ ಸೇರಿದಂತೆ ವಿವಿಧ ಪದಾರ್ಥಗಳನ್ನು ಇಡಲಾಗಿತ್ತು.ಬಳಿಕ ಹೆಣ್ಣುಮಕ್ಕಳು ಕೃಷ್ಣಾನದಿಗೆ ಪೂಜೆಯನ್ನು ಸಲ್ಲಿಸಿದ ಬಳಿಕ ಬಾಗಿನವನ್ನು ಅರ್ಪಿಸಲಾಗುತ್ತೆ.ಇದೇ ಸಂದರ್ಭದಲ್ಲಿ ಪ್ರಿಯಾಂಕಾ ಡೊಣವಾಡೆ ಎಂಬುವರು ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ‌ ಕೂಡಾ ಯುಗಾದಿ ಹಬ್ಬದ ಅಂಗವಾಗಿ ಕೃಷ್ಣಾನದಿಗೆ ಬಾಗಿನವನ್ನು ಅರ್ಪಣೆಯನ್ನು ಮಾಡಿದ್ದೇವೆ.ಬೆಳೆಗಳು ಸಮೃದ್ಧವಾಗಿ ಬೆಳೆಯಲಿ,ಜನಜಾನುವಾರುಗಳಿಗೆ ಉತ್ತಮ ರೀತಿಯ ನೀರು ಸಿಗಲಿ ಹಾಗೂ ರೈತರು ಸಮೃಧಿಯ ಬದುಕನ್ನು ಸಾಗಿಸಲಿ ಎಂದು ಕೃಷ್ಣಾನದಿಗೆ ಪ್ರಾರ್ಥಿಸಿಕೊಂಡೆವು ಎಂದರು.

ಒಟ್ಟಿನಲ್ಲಿ ‌ತಾನು ಬೆಳೆದ ಊರು ಸುಖ, ಸಮೃಧಿ,ನೆಮ್ಮದಿಯಿಂದ ಕೂಡಿರಲಿ ಎಂಬ ನಿಸ್ವಾರ್ಥ ಮನೋಭಾವನೆಯಿಂದ ಹೆಣ್ಣುಮಕ್ಕಳು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕೃಷ್ಣಾನದಿಗೆ ಅತ್ಯಂತ ಭಕ್ತಿಯಿಂದ ಬಾಗಿನ ಅರ್ಪಣೆ ಮಾಡಿರುವ ಕಾರ್ಯ ಪ್ರಶಂಸನೀಯ..

Tags:

error: Content is protected !!