ಹುಬ್ಬಳ್ಳಿಯ ಉಣಕಲ್’ನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಅಪ್ರಾಪ್ತ ಯುವಕರು ರೀಲ್ಸ್ ಮಾಡುವ ಹುಚ್ಚಾಟಕ್ಕೆ ಹೋಗಿ ಭೀಕರ ಅಪಘಾತ ಸಂಭವಿಸಿದ ಪರಿಣಾಮ 15 ವರ್ಷದ ಬಾಲಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಉಣಕಲ್ ಹಾಗೂ ತಾರಿಹಾಳ ಮಾರ್ಗದಲ್ಲಿರುವ ಮಹಾಲಕ್ಷ್ಮಿ ಲೇಔಟ್’ನಲ್ಲಿ ಇಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬಿಜೆಪಿ ಮುಖಂಡ ಸಂಗಳದ ಮಗ ನಮಿಷ ಹಾಗೂ ಆತನ ಸ್ನೇಹಿತರು ರೀಲ್ಸ್ ಮಾಡುವ ಸಲುವಾಗಿ ಆಡಿ ಕಾರು ಮತ್ತು ಓಲಾ ಎಲೆಕ್ಟ್ರಿಕ್ ಬೈಕ್ ತಗೊಂಡು ರೀಲ್ಸ್ ರೀಲ್ಸ್ ಮಾಡುತ್ತಿದ್ದಾಗ.
ಆಡಿ ಕಾರು ಅತಿವೇಗವಾಗಿ ಚಾಲನೆ ಮಾಡುತ್ತಿದ್ದ ಇನ್ನೊಬ್ಬ ಅಪ್ರಾಪ್ತ ಬಾಲಕ 150 ರ ವೇಗದಲ್ಲಿ ಕಾರು ಚಾಲನೆ ಮಾಡುತ್ತಿದ್ದಾಗ, ಎದುರಿಗೆ ನಮಿಷ ಓಲಾ ಎಲೆಕ್ಟ್ರಿಕ್ ಬೈಕ್ ತಗೊಂಡು ಬರೋ ಸೀನ್ ವಿಡಿಯೋ ಮಾಡುತ್ತಿದ್ದಾಗ, ಓಡಿ ಕಾರು ವೇಗವಾಗಿ ಇದ್ದ ಕಾರಣ ಬಾಲಕನಿಗೆ ಕಾರು ನಿಯಂತ್ರಣ ಮಾಡಲು ಆಗದೇ ನಮಿಷ ಚಾಲನೆ ಮಾಡುತ್ತಿದ್ದ ಬೈಕ್’ಗೆ ಡಿಕ್ಕಿ ಹೊಡೆದ ಪರಿಣಾಮ ನಮಿಷ 10 ಅಡಿ ಬೈಕ್ ನಿಂದ ಹಾರಿ ತಲೆಗೆ ಏಟಾಗಿ ಸ್ಥಳದಲ್ಲೇ ಮೃತಟ್ಟಿದ್ದಾನೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಕಮಿಷನರ್ ಶಶಿಕುಮಾರ್ ಡಿಸಿಪಿ ರವೀಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಮೃತಪಟ್ಟ ಬಾಲಕ ನಮಿಷ ಶವವನ್ನು ಮರನೋತ್ತರ ಪರೀಕ್ಷೆ ಸಲುವಾಗಿ ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿ ಮುಂದಿನ ತನಿಖೆ ನಡೆಸಿದ್ದಾರೆ.ಅಷ್ಟೇ ಅಲ್ಲದೇ ಅಪ್ರಪ್ತರ ಕೈಯಲ್ಲಿ ಬೈಕ್ ಕೊಡೋರಿಗೆ ಕೂಡ ಕಮಿಷನರ್ ಖಡಕ್ ವಾರ್ನಿಂಗ್ ಕೂಡ ನೀಡಿದ್ದಾರೆ.
