ಹುಕ್ಕೇರಿ ಗ್ರಾಮ ದೇವಿ ಲಕ್ಷ್ಮಿ ದೇವಿ ಜಾತ್ರೆ ಮಾರ್ಚ 10 ರಿಂದ 14 ರ ವರೆಗೆ ನಗರದ ವಿವಿಧ ಭಾಗಗಳಲ್ಲಿ ದೇವಿ ರಥ ಮತ್ತು ಹೋನ್ನಾಟ ಆಡುವ ಮೂಲಕ ಹಿಂದೂ ಮುಸ್ಲಿಂ ಜನರು ಶಾಂತ ರೀತಿಯಿಂದ ಸೌಹಾರ್ದಯುತವಾಗಿ ಆಚರಿಸಿದರು.
ಜಾತ್ರೆಯಲ್ಲಿ ವಿವಿಧ ರಾಜಕೀಯ ಮುಖಂಡರು, ಗಣ್ಯರು ಮಠಾಧೀಶರು ದೇವಿಯ ದರ್ಶನ ಪಡೆದರೆ ವಿವಿಧ ಸಂಘಟನೆಗಳ ಮುಖಂಡರು,ಯುವ ಧುರಿಣರು ನಗರದಲ್ಲಿ ಬ್ಯಾನರ ಅಳವಡಿಸುವ ಮೂಲಕ ತಮ್ಮ ಬಲವನ್ನು ಪ್ರದರ್ಶಿಸಿದರು.

ಜಾತ್ರೆ ಸಮಯದಲ್ಲಿ ಭಕ್ತರು ಜ್ಯಾತ್ಯಾತೀತವಾಗಿ ಮನರಂಜನೆ ಆಟಗಳನ್ನು ಆಡಿ ಗಮನ ಸೆಳೆದರು.
ಮಾರ್ಚ 14 ರಂದು ಶನಿವಾರ ಲಕ್ಷ್ಮಿ ದೇವೆ ಮಂದಿರದ ಮುಂದೆ ರಂಗವಲ್ಲಿ ಹೋಯ್ದು ಕನಕದಿಂದ ತಯಾರಿಸಿದ ಕೋಣ ಬಲಿ ನೀಡಿ ಹೋನ್ನಾಟದೊಂದಿಗೆ ರಾತ್ರಿ ದೇವಿಯನ್ನು ಸೀಮೆ ದಾಟಿಸುವ ಮೂಲಕ ಜಾತ್ರೆಗೆ ತೇರೆ ಎಳೆಯಲಾಯಿತು, ಅಂದಿನಿಂದ ನಗರದಲ್ಲಿ ಯಾವದೇ ಹೋಸ ಕಾರ್ಯ,ಶುಭ ಸಮಾರಂಭಗಳನ್ನು ನಿಷೀದ್ದ ಮಾಡಲಾಗುತ್ತದೆ ನಂತರ ಯುಗಾದಿ ಪಾಡ್ಯೆ ದಿನದಂದು ದೇವಿ ಮೂರ್ತಿಗೆ ನೂತನವಾಗಿ ಅಲಂಕಾರ ಮಾಡಿ ಜಾತ್ರಾ ಕಮಿಟಿ ಸದಸ್ಯರು ಹಕ್ಕುದಾರರು ಮತ್ತು ಅರ್ಚಕರು ಬಡಿಗೇರ ಓಣಿಯ ದ್ಯಾಮವ್ವಾ ಮಂದಿರ ಮತ್ತು ಲಕ್ಷ್ಮಿ ಮಂದಿರದಲ್ಲಿ ದೇವಿಗೆ ಸೀರೆ ಉಡಿಸಿ ಉಡಿ ತುಂಬಿ ನೈವೇದ್ಯ ನೀಡುವ ಮೂಲಕ ನೂತನ ಕಾರ್ಯಗಳಿಗೆ ನಾಂದಿ ಹಾಡಲಾಯಿತು.

ಈ ಕುರಿತು ಜಾತ್ರಾ ಕಮಿಟಿ ಸದಸ್ಯ ಗುರು ಕುಲಕರ್ಣಿ ಮಾತನಾಡಿ ಕಳೆದ ಐದು ದಿನಗಳಿಂದ ಹುಕ್ಕೇರಿ ನಗರದ ಲಕ್ಷ್ಮಿ ದೇವಿ ಜಾತ್ರೆ ಎಲ್ಲರ ಸಹಕಾರದಿಂದ ಶಾಂತ ರೀತಿಯಿಂದ ಜರುಗಿದೆ ಇದಕ್ಕೆ ಸಹಕಾರ ನೀಡಿದ ಪೋಲಿಸ್ ಇಲಾಖೆ, ಪುರಸಭೆ ಮತ್ತು ತಾಲೂಕಾ ಆಡಳಿತಕ್ಕೆ ಜಾತ್ರಾ ಕಮೀಟಿ ಸದಸ್ಯರ ಪರವಾಗಿ ಅಭಿನಂದನೆ ಸಲ್ಲಿಸಲಾಗುವದು ಎಂದರು

ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಗೋಕಾಕ ಡಿ ಎಸ್ಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ ಮತ್ತು ನಗರ ಬೀಟ ಪೋಲಿಸ ಅಧಿಕಾರಿಗಳಾದ ಅರ್ಜುನ ಮಸರಗುಪ್ಪಿ ಮತ್ತು ಮಂಜುನಾಥ ಕಬ್ಬೂರೆ ವಿಷೇಶ ತಂಡ ರಚಿಸಿ ಜಾತ್ರೆ ಯಶಸ್ವಿಗೆ ಸೂಕ್ತ ಪೋಲಿಸ್ ಬಂದೋಬಸ್ತ ಮತ್ತು ರಸ್ತೆ ಬದಿ ಜನದಟ್ಟಣೆಯ ನಿಯಂತ್ರಣ ಬಗ್ಗೆ ಕೈಕೊಂಡ ಕ್ರಮಗಳ ಕುರಿತು ಸಾರ್ವಜನಿಕರಿಂದ ಪ್ರಶಂಸೆಗಳು ವ್ಯಕ್ತವಾದವು.

