ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಆಲಗೂರು ಗ್ರಾಮದಲ್ಲಿ ಸಿಡಿಲು ಬಡಿದು 10ಕ್ಕೂ ಅಧಿಕ ಕುರಿ-ಮೇಕೆಗಳು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಗ್ರಾಮದ ಬಸವರಾಜ್ ಮಾಕೊಂಡ ಅವರಿಗೆ ಸೇರಿದ ಕುರಿ-ಮೇಕೆಗಳು ಜಮೀನಿನಲ್ಲಿ ಮೇಯಲು ಹೋಗಿದ್ದ ವೇಳೆ ಆಕಸ್ಮಿಕವಾಗಿ ಸಿಡಿಲು ಬಡಿದು ಸ್ಥಳದಲ್ಲೇ 13 ಕುರಿ-ಮೇಕೆಗಳು ಮೃತಪಟ್ಟಿವೆ. ಈ ಘಟನೆ ರೈತನಿಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿದೆ.
ಸಿಡಿಲಿನ ತೀವ್ರತೆಯಿಂದ ಪಶುಗಳು ತಕ್ಷಣವೇ ಸಾವನ್ನಪ್ಪಿದ್ದು, ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದೆ. ನಷ್ಟಕ್ಕೊಳಗಾದ ಕುರಿಗಾಯಿ ಸರ್ಕಾರದಿಂದ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಈ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Vijaypura
ಸಿಡಿಲು ಬಡಿದು 13 ಕುರಿ-ಮೇಕೆ ಸಾವು – ವಿಜಯಪುರದಲ್ಲಿ ರೈತನಿಗೆ ಭಾರಿ ನಷ್ಟ
