• ಪ್ಯಾಟ್ಸನ್ ಟೋಯೋಟಾದಲ್ಲಿ ಯುಗಾದಿ ಹಬ್ಬದ ಸಡಗರ
• ಮೊದಲ ದಿನವೇ 28 ಕಾರುಗಳ ಮಾರಾಟ
• ಮೂರು ತಿಂಗಳಲ್ಲಿ 200 ವಾಹನಗಳ ವಿತರಣೆ
• ಗ್ರಾಹಕರ ಮನಗೆದ್ದ ಪ್ಯಾಟ್ಸನ್ ವಿಶ್ವಾಸಾರ್ಹ ಸೇವೆ
ಬೆಳಗಾವಿಯ ವಾಹನ ಕ್ಷೇತ್ರಗಳಲ್ಲಿ ಪ್ಯಾಟ್ಸನ್ ಕಂಪನಿ ಅತ್ಯಂತ ಮಹತ್ತರ ಪಾತ್ರವನ್ನು ವಹಿಸಿದೆ. ಯುಗಾದಿಯ ಶುಭ ಸಂಭ್ರಮದಲ್ಲಿ ಪ್ಯಾಟ್ಸನ್ ಟೋಯೋಟಾ ಶೋಂ, ತನ್ನ ಸೇವೆಯನ್ನು ಅಧಿಕಗೊಳಿಸಿದ್ದು, ಹೊಸ ಹೊಸ ವಾಹನಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಈ ಹಿನ್ನೆಲೆ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಹಕರು ವಾಹನಗಳನ್ನು ಖರೀದಿಸಿ, ಒಳ್ಳೆಯ ಸೇವೆ ನೀಡಿದ ಪ್ಯಾಟ್ಸನ್’ಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಬೆಳಗಾವಿಯ ಪ್ಯಾಟ್ಸನ್ ಎಂದಾಕ್ಷಣ ವಾಹನಗಳ ಗ್ರಾಹಕರ ಒಂದು ವಿಶ್ವಾಸ ಮತ್ತು ಭರವಸೆಯ ಬೆಳಕಾಗಿದೆ. ಇಲ್ಲಿನ ವಿಶ್ವಾಸಾರ್ಹ ಸೇವೆಯನ್ನು ನೆಚ್ಚಿ ಗ್ರಾಹಕರು ಇಲ್ಲಿಯೇ ತಮಗಿಷ್ಟವಾದ ವಾಹನಗಳನ್ನು ಖರೀದಿಸುತ್ತಾರೆ. ಗ್ರಾಹಕರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರವಾದ ಪ್ಯಾಟ್ಸನ್ ನಗರದಲ್ಲೇ 2 ಶೋರೂಂಗಳನ್ನು ಹೊಂದಿದೆ. ಒಂದು ಉದ್ಯಮಬಾಗನಲ್ಲಿದ್ದರೇ, ಇನ್ನೊಂದು ಹಳೆಯ ಪಿ.ಬಿ.ರಸ್ತೆಯಲ್ಲಿದೆ. ಮೂರುವರೆ ಮುಹೂರ್ತಗಳಲ್ಲಿ ಒಂದಾದ ಯುಗಾದಿಯ ದಿನ ಹೊಸ ವಸ್ತುಗಳನ್ನು ಖರೀದಿಸುವುದು ವಾಡಿಕೆ. ಈ ಹಿನ್ನೆಲೆ ಇಂದು ಪ್ಯಾಟ್ಸನ್ ಟೋಯೋಟಾ ಶೋರೂಂಗೆ ಆಗಮಿಸಿದ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಹಕರು ಹೊಸ ಹೊಸ ವಾಹನಗಳನ್ನು ಖರೀದಿಸಿದರು.
ಹೊಸ ವಾಹನಗಳನ್ನು ಖರೀದಿ ತಮ್ಮ ಹಬ್ಬವನ್ನು ಇನ್ನಷ್ಟು ಸಂತಸದಿಂದ ಆಚರಿಸಿದ ಗ್ರಾಹಕರಿಗೆ ಪ್ಯಾಟ್ಸನ್ ಟೋಯೋಟಾ ಎಂ.ಡಿ.ಹರ್ಷ ಪಾಟೀಲ್ ಸ್ವಾಗತ ಕೋರಿ, ಯುಗಾದಿಯ ಶುಭಾಷಯಗಳನ್ನು ತಿಳಿಸಿದರು. ಅದೇ ರೀತಿ ಸೆಲ್ಸ್’ನ ಜನರಲ್ ಮ್ಯಾನೇಜರ್ ಸಮೀ ಜಕಾತಿ ಮತ್ತು ಜನರಲ್ ಮ್ಯಾನೇಜರ್ ಸರ್ವೀಸ್ ಜ್ಞಾನೇಶ್ ದೇಸಾಯಿ ಅವರು ಕೂಡ ಗ್ರಾಹಕರಿಗೆ ಯುಗಾದಿಯ ಶುಭಾಷಯಗಳನ್ನು ತಿಳಿಸಿದರು. ಗ್ರಾಹಕರು ತಮ್ಮ ಮೇಲಿಟ್ಟ ವಿಶ್ವಾಸ ಪ್ರೀತಿ ಸದಾ ಹೀಗೆಯೇ ಇರಲಿ ಎಂದರು.
ಈ ವೇಳೆ ಹೊಸ ಕಾರುಗಳನ್ನು ಖರೀದಿಸಿ ಸಂತಸದಲ್ಲಿದ್ದ ಗ್ರಾಹಕರು ಪ್ಯಾಟ್ಸನ್ ಟೋಯೋಟಾ ಸೇವೆಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಹಲವು ದಿನಗಳಿಂದ ಪ್ಯಾಟ್ಸನ್ ಟೋಯೋಟಾ ಹೆಸರು ಮತ್ತು ಸೇವೆಯ ಬಗ್ಗೆ ಕೇಳಿದ್ದೇವು. ಈಗ ಅವರ ಬಳಿ ವಾಹನವನ್ನು ಖರೀದಿಸಿದ್ದು, ನಿಜಕ್ಕೂ ಅವರ ಸೇವೆ ಅತುಲನೀಯವಾಗಿದೆ ಎಂದರು.
ಇನ್ನು ಪ್ಯಾಟ್ಸನ್ ಟೋಯೋಟಾ ವಾಹನಗಳಿಗೆ ಬೆಳಗಾವಿಯಲ್ಲಿ ಬೇಡಿಕೆ ಅತಿಯಾಗಿದ್ದು, ಯುಗಾದಿಯ ಶುಭ ಮೂಹೂರ್ತದಲ್ಲಿ ಮೊದಲ ದಿನವೇ 28 ಕಾರುಗಳನ್ನು ಗ್ರಾಹಕರು ಖರೀದಿಸಿದ್ದಾರೆ. ಕಳೆದ 3 ತಿಂಗಳಲ್ಲಿ ಸುಮಾರು 200 ವಾಹನಗಳನ್ನು ಮಾರಾಟ ಮಾಡಿ ಪ್ಯಾಟ್ಸನ್ ಟೋಯೋಟಾ ದಾಖಲೆಯನ್ನು ಬರೆದಿದೆ.
