• ವೈದ್ಯಕೀಯ ಸಿಬ್ಬಂದಿಗೆ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ
• ವೈದ್ಯರು ದೈಹಿಕವಾಗಿ ಸದೃಢರಾಗಿರಲು ಬಿಮ್ಸ್ ನಿರ್ದೇಶಕ ಕರೆ
• ದೈಹಿಕ, ಮಾನಸಿಕ ಸ್ವಾಸ್ಥ್ಯಕ್ಕೆ ಕ್ರೀಡೆಗಳೇ ಮದ್ದು: ಡಾ. ಅಶೋಕ್ ಕುಮಾರ್
• ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಮೊಳಗಿದ ಕ್ರೀಡಾ ಹಬ್ಬ
ಚಿಕಿತ್ಸೆ ನೀಡುವ ವೈದ್ಯರು ಮತ್ತು ಶುಶ್ರೂಷಕರು ಮೊದಲು ತಾವೇ ಸದೃಢವಾಗಿರಬೇಕು. ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಕ್ರೀಡೆಗಳು ಅನಿವಾರ್ಯ ಎಂದು ಬಿಮ್ಸ್ ನಿರ್ದೇಶಕ ಡಾ. ಅಶೋಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ‘ಹೀಲಿಂಗ್ ಹ್ಯಾಂಡ್ಸ್ ಮತ್ತು ರಿದಮ್ ಕೇರ್’ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರಿ ಶುಶ್ರೂಷಾ ಶಾಲೆ ಬಿಮ್ಸ್ ಮತ್ತು ಶುಶ್ರೂಷಾ ವಿದ್ಯಾರ್ಥಿಗಳ ಸಂಘದ ವತಿಯಿಂದ ಹೀಲಿಂಗ್ ಹ್ಯಾಂಡ್ಸ್ ಮತ್ತು ರಿದಮ್ ಕೇರ್ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ರಾಯವ್ವಗೊಳ, ಯುವಾ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಬಿ. ಶ್ರೀನಿವಾಸ, ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ್ ಗೋಕಾವಿ ಉಪಸ್ಥಿತರಿದ್ಧರು. ಬಿಮ್ಸ್ ನಿರ್ದೇಶಕ ಡಾ. ಅಶೋಕುಮಾರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಗೌರವಾನ್ವಿತ ಅತಿಥಿಗಳಾಗಿ ರೇಷ್ಮಾ ತಾಳಿಕೋಟಿ, ಡಾ. ಉಮೇಶ ಕುಲಕರ್ಣಿ, ಡಾ. ಸರೋಜ್ ತಿಗಡ್ಡಿ, ಡಾ. ನಾಮದೇವ ಮಾಳಗಿ, ಡಾ. ಈರಣ್ಣಾ ಪಲ್ಲೇದ, ಡಾ. ಜಗದೀಶ ಗಾಣಗಿ, ಕಾಂಚನಮಾಲಾ ಸೂರ್ಯವಂಶಿ, ಲಗಮಣ್ಣ ಪಂಗಣ್ಣವರ, ಡಾ. ಪ್ರಕಾಶ್ ಕೊಡ್ಲಿ ಉಪಸ್ಥಿತರಿದ್ಧರು. ಗಣ್ಯರಿಂದ ಕ್ರೀಡಾ ಜ್ಯೋತಿಯನ್ನು ಬರಮಾಡಿಕೊಂಡು, ಬಲೂನು ಹಾರಿಬಿಟ್ಟು, ಕ್ರೀಡಾ ಧ್ವಜಾರೋಹಣದೊಂದಿಗೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. (ಫ್ಲೋ)
ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಲು ಸದೃಢವಾಗಿರಬೇಕು. ತಾವೇ ರೋಗಿಗಳಾಗಿರಬಾರದು. ಈ ಹಿನ್ನೆಲೆ ಪ್ರತಿದಿನ ದೈಹಿಕ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂದು ಯುವಾ ಸಬಲೀಕರಣ ಇಲಾಖೆಯ ಉಪನಿರ್ದೇಶಕ ಬಿ. ಶ್ರೀನಿವಾಸ,ಕರೆ ನೀಡಿದರು.
ಈ ವೇಳೆ ಮಾತನಾಡಿದ ಬಿಮ್ಸ್ ನಿರ್ದೇಶಕ ಡಾ. ಅಶೋಕ್ ಕುಮಾರ್ ಶೆಟ್ಟಿ ಅವರು, ದೈನಂದಿನ ಜೀವನದೊಂದಿಗೆ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳು ಅತ್ಯಗತ್ಯ. ದೈಹಿಕ ಮತ್ತು ಮಾನಸೀಕ ಸ್ವಾಸ್ಥ್ಯ ಅತ್ಯಂತ ಮಹತ್ವದ ವಿಷಯಗಳಾಗಿವೆ. ದೈಹಿಕ ಮತ್ತು ಮಾನಸೀಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಪೂರಕವಾಗಿವೆ. ದಿನದ ಆರಂಭ ಚೆನ್ನಾಗಿದ್ದರೇ, ದಿನಪೂರ್ತಿ ಕಾರ್ಯಚಟುವಟಿಕೆಗಳು ಸಕ್ರಿಯವಾಗಿರುತ್ತವೆ ಎಂದರು.
ಈ ಸಂದರ್ಭದಲ್ಲಿ ಹಲವರು ಸ್ಪರ್ಧೆಯಲ್ಲಿ ಭಾಗಿಯಾಗಿ ತಮ್ಮ ಕೌಶಲ್ಯವನ್ನು ತೋರಿಸಿದರು.
