Belagavi

ಸಕ್ಕರೆ ಕಾರ್ಖಾನೆಗಳಿಗೆ ಜಿಎಸ್‌ಟಿ ಪಾಲನೆ ಕುರಿತು ತರಬೇತಿ ಕಾರ್ಯಾಗಾರ; ಏಪ್ರಿಲ್‌ನಲ್ಲಿ ಎರಡನೇ ಹಂತದ ಚರ್ಚೆ

Share

• ಸಕ್ಕರೆ ಘಟಕಗಳಿಗೆ ಜಿಎಸ್‌ಟಿ ಪಾಲನೆ ತರಬೇತಿ
• ಲೋಪ ತಡೆಯಲು ತಜ್ಞರಿಂದ ಮಹತ್ವದ ಸಲಹೆ
• ಏಪ್ರಿಲ್‌ನಲ್ಲಿ ಎರಡನೇ ಹಂತದ ಬೃಹತ್ ಕಾರ್ಯಾಗಾರ
• 80ಕ್ಕೂ ಹೆಚ್ಚು ಪ್ರತಿನಿಧಿಗಳ ಸಕ್ರಿಯ ಭಾಗಿ

ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ “GST Compliances by Sugar Factories and Distillery Units” ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿಯಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದಲ್ಲಿ ಬೆಳಗಾವಿ ಖ್ಯಾತ ಲೆಕ್ಕಪರಿಶೋಧಕರಾದ ಶ್ರೀ. ಪ್ರವೀಣ ಘಾಳಿ ಇವರು ಸಕ್ಕರೆ ಕಾರ್ಖಾನೆ ಮತ್ತು ಡಿಸ್ಟಿಲರಿ ಘಟಕಗಳ ಹಣಕಾಸು ವಿಭಾಗದ ಅಧಿಕಾರಿಗಳಿಗೆ ಜಿಎಸ್‌ಟಿ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಕಾರ್ಯಾಗಾರದ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ನಿರ್ದೇಶರಾದ ರಾಜಗೋಪಾಲ ಇವರು ಮಾತನಾಡಿ ಜಿಎಸ್‌ಟಿ ವಿಷಯದ ಕುರಿತು ವಿವರವಾದ ಮಾಹಿತಿ ಪಡೆದಲ್ಲಿ ಮುಂದಿನ ದಿನಗಳಲ್ಲಿ ಆಗುವ ಲೋಪಗಳನ್ನು ಪ್ರಾಥಮೀಕ ಹಂತದಲ್ಲಿ ತಡೆಯಬಹುದು ಎಂದು ತಿಳಿಸಿ ಇದ್ದಕ್ಕೆ ಹೆಚ್ಚಿನ ಹಾಗೂ ಎರಡನೇ ಹಂತದ ಮಾಹಿತಿಗಾಗಿ ಏಪ್ರೀಲ್ ೨೦೨೬ ರ ಕೊನೆಯ ವಾರದಲ್ಲಿ ಮತ್ತೊಂದು ಕಾರ್ಯಾಗಾರವನ್ನು ಏರ್ಪಡಿಸಿ ಸಕ್ಕರೆ ಕಾರ್ಖಾನೆಗಳಿಗೆ ಜಿಎಸ್‌ಟಿ ಕುರಿತಾದ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರಾತ್ಮಕವಾದ ಚರ್ಚೆಯನ್ನು ನಡೆಸಲಾಗುವುದು ಎಂದು ಸಭೆಗೆ ತಿಳಿಸುತ್ತ ಕಾರ್ಯಾಗಾರಕ್ಕೆ ಶುಭ ಕೋರಿದರು. ಸಿ.ಬಿ. ಪಾಟೀಲ್, ತಾಂತ್ರಿಕ ಸಲಹೆಗಾರರು: ಸಕ್ಕರೆ ತಂತ್ರಜ್ಞಾನ ಇವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ವೃಷಭ ಅಸ್ಕಿ, ಸಕ್ಕರೆ ತಂತ್ರಜ್ಞರು ಕಾರ್ಯಾಗಾರವನ್ನು ನಿರೂಪಿಸಿ ವಂದನಾರ್ಪಣೆ ಹೇಳಿದರು. ಈ ಕಾರ್ಯಾಗಾರದಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳ ಸುಮಾರು ೮೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು.

Tags:

error: Content is protected !!