Bagalkot

ಬಾಗಲಕೋಟೆಯಲ್ಲಿ ವರುಣನ ಆರ್ಭಟ: ಸಿಡಿಲಿಗೆ ಸುಟ್ಟು ಭಸ್ಮವಾದ ತೆಂಗಿನ ಮರಗಳು, ಸಂಕಷ್ಟದಲ್ಲಿ ರೈತ!!!

Share

ಬಾಗಲಕೋಟೆ ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯೇ ಅನಾಹುತ ಸೃಷ್ಟಿಸಿದೆ. ಗುಡುಗು-ಸಿಡಿಲಿನ ಅಬ್ಬರಕ್ಕೆ ಮುಧೋಳದ ಕನಸಗೇರಿ ಗ್ರಾಮದಲ್ಲಿ ತೆಂಗಿನ ಮರಗಳು ಬೆಂಕಿಗಾಹುತಿಯಾಗಿದ್ದು, ಅನ್ನದಾತನ ಬದುಕು ಬೀದಿಗೆ ಬಿದ್ದಿದೆ.
ಬಾಗಲಕೋಟೆ ಜಿಲ್ಲೆಯಾದ್ಯಂತ ನಿನ್ನೆ ತಡರಾತ್ರಿ ಗುಡುಗು, ಸಿಡಿಲು ಹಾಗೂ ಮಿಂಚಿನ ಆರ್ಭಟದೊಂದಿಗೆ ವರ್ಷದ ಮೊದಲ ಮಳೆ ಸುರಿದಿದೆ. ಸುಮಾರು ಒಂದು ಗಂಟೆಗಳ ಕಾಲ ಸುರಿದ ಈ ಅನಿರೀಕ್ಷಿತ ಮಳೆ, ಜಿಲ್ಲೆಯ ರೈತರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಬೆಳೆದು ನಿಂತಿದ್ದ ಗೋದಿ ಹಾಗೂ ಜೋಳದ ಫಸಲು ಮಳೆಗೆ ತುತ್ತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮುಳುಗಡೆ ಜಿಲ್ಲೆಯಲ್ಲಿ ವರುಣನ ಈ ರೌದ್ರಾವತಾರ ಕಂಡು ಜನತೆ ಆತಂಕಗೊಂಡಿದ್ದಾರೆ.
ಮುಧೋಳ ತಾಲ್ಲೂಕಿನ ಕನಸಗೇರಿ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಭಾರಿ ಹಾನಿ ಸಂಭವಿಸಿದೆ. ಸಿಡಿಲು ಬಡಿದು ತೆಂಗಿನ ಮರಗಳು ಹೊತ್ತಿ ಉರಿದಿದ್ದು, ಸ್ಥಳೀಯ ರೈತ ಲೋಕಣ್ಣ ಪಾಟೀಲ ಅವರ ಶೇಡ್‌ನಲ್ಲಿದ್ದ ಪೈಪ್‌ಗಳು ಹಾಗೂ ಇತರ ಕೃಷಿ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿದ್ದು, ಬಡ ರೈತ ಕಣ್ಣೀರು ಹಾಕುತ್ತಿದ್ದಾನೆ. ಮಳೆರಾಯನ ಆಗಮನ ಹರ್ಷ ತರುವ ಬದಲು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

• ಬಾಗಲಕೋಟೆ ಜಿಲ್ಲೆಯಲ್ಲಿ ಮಳೆರಾಯನ ಭಾರಿ ಆರ್ಭಟ
• ಸಿಡಿಲಿಗೆ ಸುಟ್ಟು ಕರಕಲಾದ ತೆಂಗಿನ ಮರಗಳು
• ಕೈಗೆ ಬಂದ ಫಸಲು ನಾಶ, ಸಂಕಷ್ಟದಲ್ಲಿ ರೈತ
• ಕನಸಗೇರಿ ಗ್ರಾಮದಲ್ಲಿ ಲಕ್ಷಾಂತರ ಮೌಲ್ಯದ ವಸ್ತು ಭಸ್ಮ

Tags:

error: Content is protected !!