ಗಡಿ ನಾಡು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯ ಆವರಣದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ವಿಶೇಷ ಇಫ್ತಾರ್ ಕೂಟ ಹಾಗೂ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಹಿಂದೂ-ಮುಸ್ಲಿಂ ಬಾಂಧವರು ಒಂದೆಡೆ ಸೇರಿ ಭಾವೈಕ್ಯತೆ ಮೆರೆದ ಈ ಕಾರ್ಯಕ್ರಮದಲ್ಲಿ, ಮುಂಬರುವ ಹಬ್ಬಗಳನ್ನು ಅತ್ಯಂತ ಶಾಂತಿಯುತವಾಗಿ ಆಚರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯ ವತಿಯಿಂದ ಯುಗಾದಿ ಮತ್ತು ರಂಜಾನ್ ಹಿನ್ನಲೆ ಇಫ್ತಾರ್ ಕೂಟ ಮತ್ತು ಶಾಂತಿ ಸಭೆಯನ್ನು ಕರೆಯಲಾಗಿತ್ತು.
ಈ ವೇಳೆ ಮಾತನಾಡಿದ ಮಾರ್ಕೆಟ್ ಎಸಿಪಿ ಸಂತೋಷ್ ಸತ್ಯನಾಯಕ್ ಅವರು ಇಫ್ತಾರ್ ಮತ್ತು ಶಾಂತಿ ಸಭೆಗೆ ಸ್ವಾಗತಿಸಿದರು. 28 ದಿನಗಳ ಕಾಲ ನಮ್ಮೊಂದಿಗೆ ಸಹಕರಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಅತ್ಯಂತ ಶಾಂತಿ, ನೆಮ್ಮದಿ ಸೌಹಾರ್ದತೆಯೊಂದಿಗೆ ಹಬ್ಬ ನಡೆದಿದೆ. ಆಡಳಿತದ ಹಿತದೃಷ್ಟಿಯಿಂದ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಗಿರುತ್ತದೆ. ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಕರೆ ನೀಡಿದರು.
ಸಮಾಜದ ಪ್ರಮುಖರು ಮಾತನಾಡಿ ಬೆಳಗಾವಿ ಪೊಲೀಸ್ ಜನಸ್ನೇಹಿಯಾಗಿ ಸೇವೆಸಲ್ಲಿಸುತ್ತಿದ್ದು, ಡಿಸಿಪಿ ನಾರಾಯಣ್ ಬರಮನಿ ಅವರ ಕಾರ್ಯವನ್ನು ಪ್ರಶಂಸಿಸಿದರು.

ಮತ್ತೊರ್ವ ಪೊಲೀಸ್ ಅಧಿಕಾರಿಗಳು ಮಾರ್ಗದರ್ಶನ ಮಾಡಿದರು. ಈ ಬಾರಿ ಅತ್ಯಂತ ಶಾಂತಿಯುತವಾಗಿ ರಂಜಾನ್ ಹಬ್ಬವನ್ನು ಆಚರಿಸಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.ಉಳಿದ 2-3 ದಿನದ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಮನವಿ ಮಾಡಿದರು.
ಡಿಸಿಪಿ ನಾರಾಯಣ ಬರಮನಿ ಅವರು ಪ್ರತಿವರ್ಷದಂತೆ ಈ ಬಾರಿಯೂ ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ, ಪೊಲೀಸ್ ಇಲಾಖೆಗೆ ಸಹಕರಿಸಿ. ರಾಷ್ಟ್ರ ಅಂತಾರಾಷ್ಟ್ರ ಮಟ್ಟದಲ್ಲಿ ನಡೆಯುತ್ತಿರುವ ಘಟನೆಗಳ ಪರಿಣಾಮ ನಮ್ಮ ನಗರಗಳ ಮೇಲೆ ಬೀರದಂತೆ ಎಲ್ಲರೂ ಕೂಡಿಕೊಂಡು ರಂಜಾನ್ ಹಬ್ಬವನ್ನು ಆಚರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು.
