Vijaypura

ಮಹಾರಾಷ್ಟ್ರದ ದೇವರಿಗೆ ಬೇಕಂತೆ ವಿಜಯಪುರ ನಗರದ ಹೂಗಾರ ಮನೆತನದ ಹೂವು; 500 ವರ್ಷಗಳಿಂದ ನಡೆಯುತ್ತಿದೆ ವಿಶಿಷ್ಟ ಸಂಪ್ರದಾಯ

Share

ನೆಲ ಹಾಗೂ ಜಲ ವಿಷಯದಲ್ಲಿ ನೆರೆ ರಾಜ್ಯ ಮಹಾರಾಷ್ಟ್ರ ರಾಜ್ಯದ ಜೊತೆಗೆ ನಮ್ಮ ಕರ್ನಾಟಕದ ಸಂಬಂಧದಲ್ಲಿ ಒಂದಷ್ಟು ಭಿನ್ನಾಭಿಪ್ರಾಯಗಳಿವೆ. ನೀರಾವರಿ ಹಾಗೂ ಗಡಿ ವಿಷಯದಲ್ಲಿ ಭಿನ್ನ ರೀತಿಯ ವಿವಾದಗಳಿವೆ. ಆದ್ರೂ ಧಾರ್ಮಿಕ ವಿಷಯದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಸಂಬಂಧ ಹಾಗೂ ವ್ಯಯಕ್ತಿಕ ಸಂಬಂಧಗಳು ಅತಿ ಉತ್ತಮವಾಗಿವೆ. ಉತ್ತರ ಕರ್ನಾಟಕದ ವಿಜಯಪುರ ಹಾಗೂ ಮಹಾರಾಷ್ಟ್ರದ ಸಂಬಂಧವು ವ್ಯವಹಾರಿಕವಾಗಿಯೂ ಧಾರ್ಮಿಕವಾಗಿಯೂ ಚೆನ್ನಾಗಿದೆ. ಅಲ್ಲಿಯ ದೇವರುಗಳಿಗೆ ಇಲ್ಲಿಯ ಹೂವುಗಳು ಇರದೇ ಹೋದಲ್ಲಿ ಆಚರಣೆ ನಡೆಯುದಿಲ್ಲವಂತೆ‌‌. ಈ ಕುರಿತು ಇಲ್ಲಿದೆ ಒಂದು ವರದಿ ನೋಡೋಣ ಬನ್ನಿ…

ನೆರೆಯ ರಾಜ್ಯ ಮಹಾರಾಷ್ಟ್ರ ರಾಜ್ಯದಲ್ಲಿ ಸಾಕಷ್ಟು ದೇವಸ್ಥಾನಗಳಿವೆ. ಹೀಗಾಗಿ ಕರ್ನಾಟಕದ ಸಾಕಷ್ಟು ಭಕ್ತರು ಆ ರಾಜ್ಯಕ್ಕೆ ತೆರಳುವದು ವಾಡಿಕೆ. ಆದ್ರೆ ಇಲ್ಲೊಂದು ದೇವರಿಗೆ ಕಳೆದ 500 ಕ್ಕೂ ಹೆಚ್ಚು ವರ್ಷಗಳಿಂದ ಬಸವನಾಡು ವಿಜಯಪುರ ನಗರದಲ್ಲಿ ಒಂದು ಮನೆತನ ತಯಾರಿಸುವ ಹೂವುಗಳೇ ಬೇಕಂತೆ‌‌‌. ಹೀಗಾಗಿ ಆ ರಾಜ್ಯದ ನೂರಾರು ಜನರು ಕಾಲ್ನಡಿಗೆಯಿಂದ ಆಗಮಿಸಿ ಆ ಮನೆತನದ ಹೂವುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಅಂದ ಹಾಗೆ ಆ ಮನೆತನ ಹೆಸರೇ ಹೂಗಾರ ಮನೆತನ. ಹೂಗಾರ ಮನೆತನವು ಕಾಗದ ಹಾಗೂ ನೈಸರ್ಗಿಕ ಬಗೆ ಬಗೆ ಹೂವುಗಳನ್ನು ಬಳಸಿ ಭಾಷಿಂಗ, ಗುಡುಗಳು ,ದೇವಿಯ ಪೂಜಾ ಸಾಮಗ್ರಿಗಳನ್ನು ತಯಾರಿಸುವ ಕಾರ್ಯದಲ್ಲಿ ತೊಡಗಿದೆ. ವಿಜಯಪುರದ ಶಾಸ್ತ್ರಿ ನಗರದ ಪ್ರಕಾಶ ಹೂಗಾರ ಮನೆತನದಿಙದ 1554 ನೇ ಇಸವಿಯಿಂದ ಹೂವು ತೆಗೆದುಕೊಂಡು ಹೋಗಿ ಪೂಜಿಸಲಾಗುತ್ತಿದೆ.

ನೆರೆ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿಕ ಘೋರ್ಪಾಡಿ ಪಂಚಾಯತ್ ಪ್ರತಿಷ್ಟಿತ ಪರಂಪರೆಯುಳ್ಳ ಮಲ್ಲುದೇವಿ ದೇವಸ್ಥಾನದ ಜಾತ್ರೆಯು ಯುಗಾದಿಯಂದು ಜರುಗುತ್ತದೆ. ಹೀಗಾಗಿ ಯುಗಾದಿ ಅಮವಾಸ್ಯೆ ಮುನ್ನಾ ದಿನ ಪೂಜಾರಿಗಳು ಹಾಗು ಸಮಸ್ತ ಮಹಾರಾಷ್ಟ್ರದ ಭಕ್ತರು ಹೂವುಗಳನ್ನು ತೆಗೆದುಕೊಂಡು ಹೋಗಲು ಪಾದಯಾತ್ರೆ ಮೂಲಕ ಆಗಮಿಸುತ್ತಾರೆ. ಸಾವಿರಕ್ಕೂ ಸಂಖ್ಯೆಯಲ್ಲಿ ಸೇರಿ ಪೂಜೆ ಸಲ್ಲಿಸಿ, ಭಂಡಾರವನ್ನು ಆಡುವ ಮೂಲಕ ಹೂಗಾರ ಮನೆತನ ತಯಾರಿಸುವ ಕಾಗದದ ಹೂವುಗಳು, ಭಾಷಿಂಗ, ಗುಡುಗಳು ,ದೇವಿಯ ಪೂಜಾ ಸಾಮಗ್ರಿಗಳನ್ನು ಸುಮಾರು 100 km ಕಾಲ್ನಡಿಗೆಯಿಂದ ಬಂದು ತೆಗೆದುಕೊಂಡು ಹೋಗುತ್ತಾರೆ‌‌. ಹೀಗೆ ಬಂದ ಭಕ್ತಾದಿಗಳಿಗೆ ಹೂಗಾರ ಮನೆತನವು ಆತಿಥ್ಯ ನೀಡುತ್ತದೆ. ಹಿಂದೂಗಳ ವರ್ಷದ ಮೊದಲನೆಯ ಹಬ್ಬ ಯುಗಾದಿ ಹಾಗು ಮಲ್ಲುದೇವಿ ಜಾತ್ರೆಯು ಹೂಗಾರ ಮನೆತನದ ಹೂವುಗಳು ಇರಬೇಕು ಎಂಬುದು ಹಿರಿಯರು ಮಾಡಿಟ್ಟ ಶಾಸನವಾಗಿದೆ.

ಒಟ್ಟಾರೆ ರಾಜ್ಯ ಯಾವುದಾದರೂ ಏನು ಧಾರ್ಮಿಕ ವಿಷಯದಲ್ಲಿ ಗಡಿ,ಭಾಷೆ ಹಾಗೂ ಜಾತಿಗಳು ಅಡ್ಡಿಯಾಗದೇ ಕಳೆದ 500 ಕ್ಕೂ ಹೆಚ್ಚು ವರ್ಷಗಳಿಂದ ಈ ಸಂಪ್ರದಾಯ ನಡೆದು ಬರುವ ಮೂಲಕ ಮಾದರಿಯಾಗಿದೆ‌.

Tags:

error: Content is protected !!