ಬಿಸಿಲಿನ ಬೇಗೆಯಿಂದ ಬೆಸತ್ತಿದ್ದ ತೋಟಿಲು ಪಟ್ಟಣ ಖ್ಯಾತಿಯ ಧಾರವಾಡ ಕಲಘಟಗಿಯಲ್ಲಿ ವರುಣರಾಯ ಅಬ್ಬರ ತೋರಿಸಿದ್ದಾನೆ. ಆಲಿಕಲ್ಲು ಸಹಿತ ಮಳೆರಾಯ ಅರ್ಭಟಿಸಿದ್ದಾನೆ.
ವೈ- ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನಾದ್ಯಂತ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾ ವರಣ ನಿರ್ಮಾಣವಾಗಿತ್ತು. ಸಂಜೆ ಸಮಯ ಸಮೀಪಿಸುತ್ತಿದ್ದಂತೆ ವರ್ಷಧಾರೆ ಆಲಿಕಲ್ಲು ಸಮೇತ ಅರ್ಭಟ ತೋರಿದ್ದಾನೆ. ಪಟ್ಟಣದ ರಸ್ತೆಗಳಲ್ಲಿ ಆಲಿಕಲ್ಲು ರಾಶಿ ರಾಶಿ ಬಿದಿದ್ದು, ಸ್ಥಳೀಯರು ಹೌವ್ ಹಾರಿದರು. ಇನ್ನೂ ಆಲಿಕಲ್ಲು ಹೆಚ್ಚಿನ ಪ್ರಮಾಣದಲ್ಲಿ ಬಂದಿರುವುದರಿಂದ ಮಾವು ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಮಾವು ಕಾಯಿ ಕಟ್ಟುತ್ತಿದ್ದು, ಆಲಿಕಲ್ಲು ಹೊಡೆತದಿಂದ ಎಲ್ಲಿ ಬೆಳೆ ಈ ವರ್ಷ ಕೈ ಕೋಡುತ್ತದೆಯೋ ಎಂಬ ಆತಂಕ ಸೃಷ್ಠಿಯಾಗಿದೆ. ಜತೆಗೆ ಆಲಿಕಲ್ಲು ಮಳೆ ನೋಡಿದ ಯುವ ಸಮುದಾಯ ತಮ್ಮ ತಮ್ಮ ಮೊಬೈಲಗಳಲ್ಲಿ ಆಲಿಕಲ್ಲು ಮಳೆ ದೃಶ್ಯ ಸೆರೆ ಹಿಡಿಯುವುದು ಸಾಮನ್ಯವಾಗಿತ್ತು.
