ಮಾ. 18 ಎಪ್ರಿಲ್ 2ರವರೆಗೆ ನಡೆಯುವ 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ ಎಂದು ಡಿಡಿಪಿಐ ಸೀತಾರಾಮು ಆರ್.ಎಸ್. ಹೇಳಿದರು.
ಚಿಕ್ಕೋಡಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಿಲ್ಲೆಯ ಒಟ್ಟು 240 ಸರಕಾರಿ, 152 ಅನುದಾನಿತ ಹಾಗೂ 229, ಅನುದಾನರಹಿತ ಪ್ರೌಢಶಾಲೆಗಳಿಂದ ಒಟ್ಟು 45,598 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇದರಲ್ಲಿ ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಸೇರಿದಂತೆ 24,100 ಬಾಲಕರು ಹಾಗೂ 21,498 ಬಾಲಕಿಯರು ಇದ್ದಾರೆ,” ಎಂದು ಅವರು ತಿಳಿಸಿದರು.
“ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 131 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 39 ಕ್ಲಸ್ಟರ್ ಹಾಗೂ 92 ನಾನ್ ಕ್ಲಸ್ಟರ್
ಅಕ್ರಮ ತಡೆಯಲು 28 ಸ್ಕ್ಯಾಡ್ ತಂಡಗಳ ನಿಯೋಜನೆ ಕೇಂದ್ರಗಳಿವೆ. ಎಲ್ಲಾ 131 ಕೇಂದ್ರಗಳಲ್ಲಿ ಸಿಸಿಟಿವಿ ಹಾಗೂ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 2,134 ಪರೀಕ್ಷಾ ಕೊಠಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಹದ್ದಿನ ಕಣ್ಣಿಡಲಾಗಿದೆ. ಪ್ರತಿಯೊಂದು ಕೇಂದ್ರಕ್ಕೂ ಒಬ್ಬ ಮುಖ್ಯ ಅಧೀಕ್ಷಕ, ಒಬ್ಬ ಅಭಿರಕ್ಷಕ ಹಾಗೂ ಮೊಬೈಲ್ ಸ್ವಾಧೀನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. 131 ಸ್ಥಾನಿಕ ಜಾಗೃತ ದಳ ಹಾಗೂ 65 ಉಪಅಧೀಕ್ಷಕರನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಜಿಲ್ಲಾ ಮಟ್ಟದಲ್ಲಿ 4 ಹಾಗೂ ತಾಲೂಕು ಮಟ್ಟದಲ್ಲಿ 24 ಸ್ಟಾಡ್ ತಂಡಗಳನ್ನು ರಚಿಸಲಾಗಿದೆ. 48 ರೂಟ್ಗಳನ್ನು ಗುರುತಿಸಲಾಗಿದ್ದು, 23 ಜನ ವೆಬ್ ಕಾಸ್ಟಿಂಗ್ ವೀಕ್ಷಕರನ್ನು ನೇಮಿಸಲಾಗಿದೆ,” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಯಟ್ ಪ್ರಾಚಾರ್ಯ ಸಂಜು ಹುಲ್ಲೋಳ್ಳಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ನೋಡಲ್ ಅಧಿಕಾರಿ ಹರಿದಾಸ ಖಾಡೆ ಹಾಗೂ ರಾಜು ದೇವಋಷಿ ಉಪಸ್ಥಿತರಿದ್ದರು.
