ಮಾರ್ಚ 18 ರಿಂದ ಜರಗಲಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಹುಕ್ಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಭಾವತಿ ಪಾಟೀಲ ಹೇಳಿದರು.

ಅವರು ಇಂದು ಮಾದ್ಯಮಗಳೊಂದಿಗೆ ಮಾತನಾಡುತ್ತಾ ಹುಕ್ಕೇರಿ ಮತ್ತು ಯಮಕನಮರ್ಡಿ ಕ್ಷೇತ್ರಗಳ ವ್ಯಾಪ್ತಿಯ 19 ಕೇಂದ್ರಗಳಲ್ಲಿ 6554 ಹೋಸ ವಿದ್ಯಾರ್ಥಿಗಳು ಮತ್ತು 649 ಹಳೆ ವಿದ್ಯಾರ್ಥಿಗಳು ಸೇರಿ ಒಟ್ಟು 7203 ವಿದ್ಯಾರ್ಥಿಗಳು ಪರಿಕ್ಷೇಗೆ ಹಾಜರಾಗಲಿದ್ದಾರೆ.

ನಕಲು ರಹಿತ ಮತ್ತು ಪಾರದರ್ಶಕ ಪರಿಕ್ಷೆ ನಡೆಸಲು ಪರಿಕ್ಷೆ ಕೇಂದ್ರಗಳಲ್ಲಿ ಸಿ ಸಿ ಕ್ಯಾಮೆರಾ ಜೊತೆಗೆ ವೇಬ್ ಕನೇಕ್ಟ ಮಾಡಲಾಗಿದೆ ಪ್ರತಿ ಪರಿಕ್ಷಾ ಕೇಂದ್ರಗಳ ಚಲನ ವಲನಗಳನ್ನು ಕೇಂದ್ರ ಕಛೇರಿ ಮತ್ತು ಜಿಲ್ಲಾ ಆಡಳಿತ ನಿಗಾವಹಿಸುತ್ತದೆ ಕಾರಣ ಪರಿಕ್ಷಾ ಸಿಬ್ಬಂದಿಗಳು ಮತ್ತು ಅಭ್ಯರ್ಥಿಗಳು ಮಾತ್ರ ಕೇಂದ್ರದ ಒಳಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಹೋರಗಿನ ಯಾವದೆ ವ್ಯಕ್ತಿ ಪರಿಕ್ಷಾ ಕೇಂದ್ರದ ಒಳಗೆ ಬಂದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವದು.
ವಿಷೇಶವಾಗಿ ಹುಕ್ಕೇರಿ ತಾಲೂಕಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸರಣಿ ಪರಿಕ್ಷೆ ಮತ್ತು ಟಾಪರ್ಸ ಹಾಗೂ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳ ತಂಡ ರಚಿಸಿ ವಿಷೇಶ ತರಬೇತಿ ನೀಡಿ ವಿದ್ಯಾರ್ಥಿಯ ಗುಣಮಟ್ಟ ಕೈಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಾಗಿದೆ ಇದೆ ರೀತಿ ಹಲವಾರು ಹೋಸ ಯೋಜನೆಗಳ ಮೂಲಕ ವಿದ್ಯಾರ್ಥಿಗಳನ್ನು ಪರಿಕ್ಷೆಗೆ ತಯಾರಿ ಮಾಡಲಾಗಿದೆ. ಪರಿಕ್ಷಾ ಕೇಂದ್ರಗಳಲ್ಲಿ ಎಲ್ಲ ರೀತಿಯ ಮೂಲ ಭೂತ ಸೌಲಭ್ಯಗಳ ಜೋತೆಗೆ ವೈದ್ಯಕೀಯ ಸೌಲಭ್ಯ ಹಾಗೂ ಬಸ್ ಸೌಲಭ್ಯ ವದಗಿಸಲಾಗಿದೆ. ಅದೆ ರೀತಿ ಸುಮಾರು 550 ಸಿಬ್ಬಂದಿಗಳನ್ನು ಪರಿಕ್ಷೆಗೆ ನಿಯೋಜಿಸಲಾಗಿದೆ ಎಂದರು ..
ನಂತರ ತಹಸಿಲ್ದಾರ ಬಲರಾಮ ಕಟ್ಟಿಮನಿ ಯವರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಪರೀಕ್ಷೆಗೆ ನಿಯೋಜಿಸಿದ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಸಮಾಜ ಕಲ್ಯಾಣ ಸಹಾಯಕ ನಿರ್ದೆಶಕ ಗುರುಶಾಂತ ಪಾವಟೆ,ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎ ಎಸ್ ಪದ್ಮಣ್ಣವರ, ಎಂ ಡಿ ಬಡಿಗೇರ ಉಪಸ್ಥಿತರಿದ್ದರು.
