ಗುಮ್ಮಟ ನಗರಿ ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಕೊಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು, ವಾಹನಗಳ್ನು ಜಪ್ತಿ ಮಾಡಿದ್ದಾರೆ. ಈ ವಸ್ತುಗಳನ್ನು ಇಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಅವರ ನೇತೃತ್ವದಲ್ಲಿ ಮಾಲೀಕರಿಗೆ ಹಸ್ತಾಂತರ ಮಾಡಿದರು. ಇತ್ತ ಕಳೆದು ಹೋಗಿದ್ದ ತಮ್ಮ ವಸ್ತು ಸಿಗುವದೇ ಇಲ್ಲ ಎಂದು ಕೊಂಡಿದ್ದ ಜನರು ಮರಳಿ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಈ ಕುರಿತಾದ ಕಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ.


ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಂತರ್ ಜಿಲ್ಲಾ, ಅಂತರ್ ರಾಜ್ಯ ಕಳ್ಳರ ಬಂಧನ ಮಾಡಿದ್ದಾರೆ. ಮನೆ ದರೋಡೆ, ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ ಬಿದ್ದಿದೆ. ಮುದ್ದೇಬಿಹಾಳ, ಬಸವನ ಬಾಗೇವಾಡಿ, ನಿಡಗುಂದಿ, ತಾಳಿಕೋಟಿ, ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ, ದರೋಡೆ ಪ್ರಕರಣ ಹೀಗೆ ಒಟ್ಟು 22 ಪ್ರಕರಣ ಬೇಧಿಸಿದ ಪೊಲೀಸರು ಪ್ರಕರಣಗಳಲ್ಲಿ ಭಾಗಿಯಾಗಿದ್ದ 36 ಜನ ಆರೋಪಿಗಳ ಬಂಧನ ಮಾಡಿದ್ದಾರೆ. ಇನ್ನೂ 1.27 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, 2 ಕಾರ್, 17 ಬೈಕ್ ವಶಕ್ಕೆ ಪಡೆದಿದ್ದಾರೆ…

ಇನ್ನೂ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ಆರ್ ಟಿ ಓ ಜಯರಾಮ್ ನಾಯಕ್ ಮನೆಯಲ್ಲಿ ಸಹಿತ ಕಳ್ಳತನ ಮಾಡಿದ್ದ ಖದೀಮರು. ನಡೆದಿದ್ದ ಕಳ್ಳತನ. ಆರ್ ಟಿ ಒ ತೋಟದ ಮನೆಯಲ್ಲಿ 250 ಗ್ರಾಂ ಚಿನ್ನಾಭರಣ, 3 ಕೆ.ಜಿ ಬೆಳ್ಳಿ, 4.30 ಲಕ್ಷ ನಗದು ಖದೀಮರು ಎಗರಿಸಿದ್ದರು. ಜನೇವರಿ 21 ರಂದು ನೇಬಗೇರಿ ಎಲ್.ಟಿ ಯ ಮನೆಯಲ್ಲಿ ನಡೆದಿದ್ದ ಕಳ್ಳತನ ಬೆನ್ನಟ್ಟಿದ ಪೊಲೀಸರು, ಮೂವರು ಆರೋಪಿಗಳ ಬಂಧಿಸಿದ್ದಾರೆ. ರಾಯಚೂರು ಮೂಲದ ಗುರುರಾಜ್, ಗುರು ಕುಮಾರ್, ಸೈಯ್ಯದ್ ಅಸ್ಲಾಮ್ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೂ ಇವರ ಬಳಿ ಇನ್ನೋವಾ ಕಾರ್ ಸೇರಿ 51 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಶಕ್ಕೆ ಪಡೆದಿದ್ದಾರೆ…

ಒಟ್ಡಾರೆ ಬಸವನ ಬಾಗೇವಾಡಿ ಉಪ ವಿಭಾಗದ ವ್ಯಾಪ್ತಿಯಲ್ಲಿ ನಡೆದಿದ್ದ 2025-2026 ನೇ ಸಾಲಿನ ಒಟ್ಟು 22 ವಿವಿಧ ಸ್ವತ್ತಿನ ಪ್ರಕರಣಗಳು ಬೇಧಿಸಿದ ಪೊಲೀಸರು 36 ಜನ ಆರೋಪಿಗಳಿಗೆ ಜೈಲಿಗಟ್ಟಿದ್ದಾರೆ. ಇತ್ತ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ವ್ಯಕ್ತವಾಗಿದೆ…
