BELAGAVI

ಬೆಳಗಾವಿಯಲ್ಲಿ ಶಿವಾಜೀ ಮಹಾರಾಜರು, ನೇತ್ಯಾಹೂ ಮತ್ತು ಮೋದಿ ಫಲಕ ಅಳವಡಿಸಿದ ಶ್ರೀರಾಮಸೇನೆ…!!!

Share

ಬೆಳಗಾವಿಯಲ್ಲಿ ಒಂದೆಡೇ ಇರಾನ್ ಪ್ರಮುಖ ಅಲಿ ಖಮೇನಿ ಭಾವಚಿತ್ರಗಳ ಭರಾಟೆ ಹೆಚ್ಚಾಗುತ್ತಿದ್ದಂತೆ ಇನ್ನೊಂದೆಡೇ ಶ್ರೀರಾಮಸೇನೆಯ ವತಿಯಿಂದ ಛತ್ರಪತಿ ಶಿವಾಜೀ ಮಹಾರಾಜ್, ಇಸ್ರೇಲ್ ಪಿಎಂ ನೇತ್ಯಾಹೂ ಮತ್ತು ದೇಶದ ಪಿಎಂ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಫಲಕಗಳನ್ನು ಅಳವಡಿಸುವ ಅಭಿಯಾನವನ್ನು ಆರಂಭಿಸಲಾಗಿದೆ.

ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಬೆಳಗಾವಿ ನಗರದಲ್ಲಿ ಅನ್ಯ ಕೋಮಿನವರಿಂದ ನಗರದಲ್ಲಿ ಇರಾನ್ ಪ್ರಮುಖ ಅಲಿ ಖಮೇನಿ ಭಾವಚಿತ್ರಗಳನ್ನು ಅಳವಡಿಸಲಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಬೇಕೆಂದು ಬೆಳಗಾವಿ ಪೊಲೀಸ್ ಇಲಾಖೆಗೆ ಮತ್ತು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಲಾಗಿತ್ತು. ಒಂದು ವೇಳೆ ಸ್ಪಂದನೆ ದೊರೆಯದಿದ್ದರೇ, ನಗರದ ಪ್ರಮುಖ ಸ್ಥಳಗಲ್ಲಿ ಛತ್ರಪತಿ ಅಫಜಲ್ ಖಾನ್ ವಧಿಸಿದ ಶಿವಾಜೀ ಮಹಾರಾಜ್, ಇಸ್ರೇಲ್ ಪಿಎಂ ನೇತ್ಯಾಹೂ ಮತ್ತು ದೇಶದ ಪಿಎಂ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಫಲಕಗಳನ್ನು ಹಾಕುವ ಎಚ್ಚರಿಕೆಯನ್ನು ನೀಡಲಾಗಿತ್ತು. ಅದರಂತೆ ಇಂದು ಬೆಳಗಾವಿ ಆರ್.ಟಿ.ಓ ಸಂಗೋಳ್ಳಿ ರಾಯಣ್ಣ ವೃತ್ತದ ಬಳಿ ಮತ್ತು ಸಾಮ್ರಾಟ್ ಅಶೋಕ್ ವೃತ್ತದ ಬಳಿ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಜಿಲ್ಲಾಧ್ಯಕ್ಷ ರವಿ ಕುಮಾರ್ ಕೋಕಿತಕರ ಸೇರಿದಂತೆ ಇನ್ನುಳಿದವರ ಉಪಸ್ಥಿತಿಯಲ್ಲಿ ಫಲಕಗಳನ್ನು ಅಳವಡಿಸಿ ಭಾರತ ಪರ, ಶಿವಾಜೀ ಮಹಾರಾಜರು, ಸಂಭಾಜೀ ಮಹಾರಾರು, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ.ಅಂಬೇಡ್ಕರ್ ಪರ ಜೈಕಾರ ಕೂಗಲಾಯಿತು.

Tags:

error: Content is protected !!