BELAGAVI

ಬಿಮ್ಸ್ ಆಸ್ಪತ್ರೆ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್‌ನಲ್ಲಿ ಗಂಭೀರ ಚರ್ಚೆ; ಸಿಬ್ಬಂದಿ ನೇಮಕಾತಿಗೆ ಸಚಿವ ಶರಣಪ್ರಕಾಶ್ ಪಾಟೀಲ್ ಭರವಸೆ

Share

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿದೆ. ಸದಸ್ಯ ನಾಗರಾಜ್ ಎಂ. ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶೀಘ್ರದಲ್ಲೇ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ನಾಗರಾಜ್ ಎಂ. ಅವರು ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಆಸ್ಪತ್ರೆಗೆ ಕೇವಲ ಬೆಳಗಾವಿ ಜಿಲ್ಲೆಯಷ್ಟೇ ಅಲ್ಲ. ಪಕ್ಕದ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನರು ಮತ್ತು ನೆರೆಯ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಜನರು ಕೂಡ ಚಿಕಿತ್ಸೆಗೆ ಆಗಮಿಸುತ್ತಾರೆ. ಸುಮರು 2 ಸಾವಿರ ಹೊರ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೇ, ಅಲ್ಲಿ ಸಿಬ್ಬಂದಿಗಳ ಕೊರತೆ ಶೇ. 40 ರಷ್ಟಿದ್ದು, ಅದನ್ನು ಸರಿಪಡಿಸಬೇಕು. ಕಳೆದ ಬಾರಿ ವಿದ್ಯುತ್ ವ್ಯತ್ಯಯವಾಗಿತ್ತು, ಸೋಲಾರ್ ಕೂಡ ಕೆಲಸ ಮಾಡುತ್ತಿಲ್ಲ. ಉಪಕರಣಗಳ ನಿರ್ವಹಣೆ ಮಾಡಬೇಕು ಇನ್ನುಳಿದ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿದರು. ಅಲ್ಲದೇ ಸ್ಥಳೀಯ ತನಿಖೆಯನ್ನು ಮಾಡಿ ಭ್ರಷ್ಟಾಚಾರವನ್ನು ತಗ್ಗಿಸಬೇಕೆಂದರು.

ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಪ್ರತಿಕ್ರಿಯಿಸಿ, 7 ಸಹ ಪ್ರಾಧ್ಯಾಪಕರು, 17 ಸಹಾಯಕ ಪ್ರಾಧ್ಯಾಪಕರು, 44 ಹಿರಿಯ ನಿವಾಸಿ ವೈದ್ಯರ ಹುದ್ಧೆಗಳು ಖಾಲಿಯಿದ್ದು, ಶೀಘ್ರದಲ್ಲೇ ರೋಸ್ಟರ್ ಮಾಡಿ, ನೇಮಕಾತಿಯನ್ನು ಬೇಗನೇ ಮಾಡಲಾಗುವುದು. ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆಯಿದೆ. ಇಎಂಸಿ ಸಿಎಂಸಿ ನಾರ್ಮಲ್ ಕೋರ್ಸ್’ನಲ್ಲಿ ನಡೆಯುತ್ತದೆ. ಉಪಕರಣಗಳಿಗೆ ಬೇಕಾದ ಇಎಂಸಿ ಸಿಎಂಸಿಯನ್ನು ಮಾಡಲಾಗಿದೆ. 238 ಜನರು ಸೇವೆ ಸಲ್ಲಿಸುತ್ತಿದ್ದು, ಕೇವಲ 68 ಹುದ್ಧೆಗಳು ಮಾತ್ರ ಖಾಲಿಯಿವೆ. ಸೂಪರ್ ಸ್ಪೆಶಾಲಿಟಿಗಾಗಿಯೂ ಹುದ್ಧೆಗಳನ್ನು ಕರೆಯಲಾಗಿದೆ. ಸಂಪೂರ್ಣವಾಗಿ ಕೆ.ಎಲ್.ಇ ಮೇಲೆ ಸರ್ಕಾರ ಅವಲಂಬಿತವಾಗಿಲ್ಲ. ಒಂದು ವೇಳೆ ದೂರುಗಳು ಬಂದರೇ ವಿಚಾರಣೆ ಮಾಡಲಾಗುವುದು ಎಂದರು.

ಇದಕ್ಕೆ ಸದಸ್ಯ ನಾಗರಾಜು ಎಂ., ಅವರು ಜಿಲ್ಲಾಸ್ಪತ್ರೆಯಲ್ಲಿ ಡ್ರಗ್ಸ್ ಕೊರತೆಯಿದೆ ಎಂದರು. ಬಿಮ್ಸ್ ಬಗ್ಗೆ ಚರ್ಚಿಸಲು ಅರ್ಧ ಗಂಟೆ ಸಮಯ ನೀಡಬೇಕೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ಒಂದು ವೇಳೆ ಹೊರಗಿನಿಂದ ಮೆಡಿಸಿನ್ಸ್ ತರಿಸಿಕೊಳ್ಳುತ್ತಿದ್ದರೇ, ಕ್ರಮಕೈಗೊಳ್ಳಲಾಗುವುದು ಎಂದರು.

Tags:

error: Content is protected !!