ಬೆಳಗಾವಿಯ ಕರಾಟೆ ಕ್ರೀಡಾ ಲೋಕದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ (BDSKA) ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದೆ. ಈ ಕುರಿತು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಕಾರ್ಯದರ್ಶಿ ಜಿತೇಂದ್ರ ಕಾಕತಿಕರ್ ಅವರು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ಕರಾಟೆ ಕ್ರೀಡೆಯನ್ನು ಉತ್ತೇಜಿಸುವ ಮತ್ತು ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ, ಬೆಳಗಾವಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ (BDSKA) ತನ್ನ ಸಂಘಟನಾತ್ಮಕ ರಚನೆಯನ್ನು ಬಲಪಡಿಸಿದೆ. ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ (AKSKA) ಮತ್ತು ಕರಾಟೆ ಇಂಡಿಯಾ ಆರ್ಗನೈಸೇಶನ್ (KIO) ನ ಮಾನ್ಯತೆ ಪಡೆದಿರುವ BDSKA, ಜಿಲ್ಲೆಯಾದ್ಯಂತ ಕರಾಟೆ ತರಬೇತಿಯಲ್ಲಿ ಗುಣಮಟ್ಟ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ. ಈ ನಿಟ್ಟಿನಲ್ಲಿ ವಿವಿಧ ವಿಭಾಗಗಳಿಗೆ ಸಮರ್ಥ ನಾಯಕರನ್ನು ನೇಮಕ ಮಾಡುವ ಮೂಲಕ ಸಂಘಟನೆಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಲಾಗಿದೆ.ಜಿಲ್ಲೆಯ ಎಲ್ಲಾ ಕರಾಟೆ ತರಬೇತಿ ಕೇಂದ್ರಗಳು ಮತ್ತು ಅಕಾಡೆಮಿಗಳು BDSKA ಅಡಿಯಲ್ಲಿ ಕರೆ ನೀಡಿದರು. ಬೈಟ್
ಇನ್ನು ಗಜೇಂದ್ರ ಕಾಕತಿಕರ ಅವರು BDSKA ನೂತನ ಪದಾಧಿಕಾರಿಗಳ ಮಾಹಿತಿಯನ್ನು ನೀಡಿದರು. ಮುಖ್ಯ ಪದಾಧಿಕಾರಿಗಳಾಗಿ ಅಧ್ಯಕ್ಷರು: ಗಜೇಂದ್ರ ಕಾಕತಿಕರ್

ಕಾರ್ಯದರ್ಶಿ: ಜಿತೇಂದ್ರ ಕಾಕತಿಕರ್ ಉಪಾಧ್ಯಕ್ಷರಾಗಿ ನಗರ: ರಾಘವೇಂದ್ರ ಹಂಗಲ್, ವಿನಾಯಕ ಮೋರೆ ಗ್ರಾಮೀಣ: ಪರಶುರಾಮ್ ಕಾಕತಿ, ಪ್ರಭಾಕರ್ ಕಿಲ್ಲೇಕರ್, ತಾಂತ್ರಿಕ ಆಯೋಗ (ಸಲಹೆಗಾರ: ಭೂಷಣ್ ಪಾಟೀಲ್, ಸಮನ್ವಯಕಾರರು: ಶಾಹೀರ್ ಶೇಖ್, ಓಂಕಾರ ಕಾರೇಕರ್ ತೀರ್ಪುಗಾರರ ಆಯೋಗ ಅಮಿತ್ ವಸನೆ, ಚಂದನ್ ಜೋಷಿ, ಲಕ್ಷ್ಮಣ್ ನಾಯಕ್, ಸಮನ್ವಯಕಾರರು: ವಿನಾಯಕ ದಂಡಕರ್, ಕೃಷ್ಣ ಜಾಧವ್, ಸುರೇಶ್ ಎಸ್.ಬಿ.ಕ್ರೀಡಾ ತರಬೇತುದಾರರು ಪುರುಷರು: ಅಕ್ಷಯ್ ಪಾರ್ಮೋಜಿ, ಹರೀಶ್ ಸೋನಾರ್, ಮಹಿಳೆಯರು: ನತಾಶಾ ಅಶಾಟೇಕರ್, ಪ್ರಗತಿ ಕಮಲ್, ತಾಲೂಕು ಸಮನ್ವಯಕಾರರು:ಬೈಲಹೊಂಗಲ: ಸುಹಾಸ್ ವಾಕುಂದ್ (ಸಲಹೆಗಾರ – ಅಥ್ಲೀಟ್ಸ್ ಕಮಿಷನ್) ಸವದತ್ತಿ: ರಾಜಶೇಖರ್ ಭೂಸನೂರಮಠ, ಗೋಕಾಕ: ಮಹಂತೇಶ್, ಸುರೇಶ್ ಎಸ್.ಬಿ. (ಗೋಕಾಕ್ ತಾಲೂಕು)ಖಾನಾಪುರ: ರಾಹುಲ್ ಪಾಟೀಲ್ ಸೇರಿದಂತೆ ಇನ್ನುಳಿದ ಮಾಹಿತಿಯನ್ನು ನೀಡಿದರು. ಬೈಟ್
ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಸತ್ಕರಿಸಿ ಅಭಿನಂದಿಸಲಾಯಿತು.
