Vijaypura

ಶಿವಗಿರಿ ಶಿವನ ದರ್ಶನ ಪಡೆದ ಸಚಿವ ಎಂ.ಬಿ.ಪಾಟೀಲರ ಪತ್ನಿ ಆಶಾ ಪಾಟೀಲ

Share

ವಿಜಯಪುರ ನಗರದ ಹೊರವಲಯದಲ್ಲಿ ಇರುವ ಶಿವಗಿರಿಗೆ ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಇವರ ಧರ್ಮಪತ್ನಿ ಶ್ರೀಮತಿ ಆಶಾ ಪಾಟೀಲ ಇವರು ನಿನ್ನೆ ಸಾಯಂಕಾಲ ಏಕಾಏಕಿ ಭೇಟಿ ನೀಡಿ ಶಿವನ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಗರದ ಹೊರಭಾಗದಲ್ಲಿ ಇರುವ ಟಿ.ಕೆ.ಪಾಟೀಲ ಚಾರಿಟಬಲ್ ಟ್ರಸ್ಟ್ ನ ಶಿವಗಿರಿಯಲ್ಲಿ ಶಿವನನ್ನು ನೋಡುವದೊಂದು ಚೆಂದ. ಶಿವಗಿರಿಯಲ್ಲಿ ಮಂದಸ್ಮಿತ ಶಿವನನ್ನು ನೋಡುವದೇ ಒಂದು ಆನಂದ.

ಶಿವಗಿರಿಯಲ್ಲಿ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸ್ನೇಹಿ ಟ್ರಸ್ಟ್ ಆಗಹತ್ತಿದೆ. ಶಿವಗಿರಿಗೆ ನಿನ್ನೆ ಸಾಯಂಕಾಲ ಶ್ರೀಮತಿ ಆಶಾ ಪಾಟೀಲ ಭೇಟಿ ನೀಡಿ ಟ್ರಸ್ಟ್ ನ
ಸಾಮಾಜಿಕ, ಧಾರ್ಮಿಕ ಹಾಗೂ ಪರಿಸರ ಸ್ನೇಹಿ ಕಾರ್ಯಗಳ ಕುರಿತು ಮಾಹಿತಿ ಪಡೆದರು. ಶಿವಗಿರಿ ದೇವಸ್ಥಾನ ಹಾಗೂ ತಪೋವನದ ವ್ಯವಸ್ಥಾಪಕಿ ಶ್ರೀಮತಿ ಆರತಿ ಪಾಟೀಲ ಅವರು ಮಾಹಿತಿ ನೀಡಿದರು. ಮಾಹಿತಿ ಪಡೆದ ಆಶಾ ಪಾಟೀಲರು ಮೆಚ್ಚುಗೆ ಸೂಚಿಸಿದರು. ಈ ವೇಳೆ ಆಶಾ ಪಾಟೀಲರಿಗೆ ನೆನಪಿನ ಕಾಣಿಕೆ, ಶಿವನ ಪ್ರಸಾದವನ್ನು ಕೊಡಮಾಡಿದರು.

Tags:

error: Content is protected !!