ರಾಜ್ಯದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ವಿಧಾನ ಸಭೆ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಉಭಯ ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತುರುಸಿನ ಸ್ಪರ್ಧೆ ನಡೆಯುವದು ಖಚಿತವಾಗಿದೆ. ಆದ್ರೆ ಈಗ ಎಲ್ಲರ ಚಿತ್ತ ವಿಜಯಪುರ ಶಾಸಕ ಯತ್ನಾಳರತ್ತ ಎನ್ನುವಂತಾಗಿದೆ. ಜೆಸಿಬಿಯಿಂದ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವವರೇ ಎಂಬ ಯಕ್ಷ ಪ್ರಶ್ನೆ ಯತ್ನಾಳ ಪರ ಹಾಗೂ ವಿರೋಧಿಗಳಲ್ಲಿ ಮನೆ ಮಾಡಿದೆ. ಈ ಕುರಿತು ಇಲ್ಲಿದೆ ಇನ್ ನ್ಯೂಜ್ ಪೊಲಿಟಿಕಲ್ ರಿಪೊರ್ಟ್…

ಹೌದು ನಿರೀಕ್ಷೆಯಂತೆ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಹೆಚ್.ವೈ.ಮೇಟಿ ನಿಧನದಿಂದ ಬಾಗಲಕೋಟೆ ಕ್ಷೇತ್ರ ತೆರವಾಗಿದ್ದರೆ, ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರ ಖಾಲಿಯಾಗಿತ್ತು. ಇದೀಗ ಈ ಎರಡೂ ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದು, ಏಪ್ರಿಲ್ 9ರಂದು ಎರಡೂ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ. ಇನ್ನು ಇಂದಿನಿಂದಲೇ ಉಪ ಚುನಾವಣೆ ಅಧಿಸೂಚನೆ ಪ್ರಕಟವಾಗಲಿದ್ದು, ಮಾರ್ಚ್ 24ರಂದು ನಾಮಪತ್ರ ಸಲ್ಲಿಸಲು ಮತ್ತು ಮಾರ್ಚ್ 26 ನಾಮಪತ್ರ ಹಿಂಪಡೆಯಲು ಕೊನೆ ದಿನ ಆಗಿರಲಿದೆ. ಈ ನಡುಬೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಯಾರಿಯಲ್ಲಿ ತೊಡಗಿವೆ. ಈ ಮದ್ಯೆ ಬಿಜೆಪಿ ಉಚ್ಚಾಟಿತ ಫೈರ್ ಬ್ರ್ಯಾಂಡ್ ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಉಪ ಚುನಾವಣೆಯಲ್ಲಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವರೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ನಿನ್ನೆ ತಾನೆ ಮಗನ ಮದುವೆ ಮುಗಿಸಿರುವ ಶಾಸಕ ಯತ್ನಾಳ ರತ್ತ ದೃಷ್ಟಿ ನೆಟ್ಟಿದೆ. ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದ ವಿರುದ್ದ ನಿಗಿನಿಗಿ ಕೆಂಡಕಾರುವ ಯತ್ನಾಳ ಬಿಜೆಪಿ ಗೆ ಮರಳುವ ತವಕದಲ್ಲಿ್ದರೂ ಬಿಜೆಪಿ ಹೈಕಮಾಂಡ್ ಕ್ಯಾರೆ ಎನ್ನುತ್ತಿಲ್ಲಾ. ಇದ್ರಿಂದ ಕೋಪಗೊಂಡಿರುವ ಯತ್ನಾಳ ಬಿಜೆಪಿ ತಕ್ಕ ಪಾಠ ಕಲಿಸಲು ಈಗ ಸಿಕ್ಕಿರುವ ಸುವರ್ಣ ಅವಕಾಶವನ್ನು ಬಳಸಿಕೊಳ್ಳುವವರೇ ಎಂಬ ಪ್ರಶ್ನೆ ಯತ್ನಾಳ ವಿರೋಧಿ ಹಾಗೂ ಪರ ಗ್ಯಾಂಗ್ ನಲ್ಲಿಯೂ ಕಾಡಹತ್ತಿದೆ. ಬಾಗಲಕೋಟ ಹಾಗೂ ದಾವಣಗೆರೆಯಲ್ಲಿ ಯತ್ನಾಳರಿಗೆ ಸಾಕಷ್ಟು ಪ್ರಮಾಣದಲ್ಲಿ ಬೆಂಬಲಿಗರು ಇದ್ದಾರೆ. ಇನ್ನೂ ಯತ್ನಾಳ ಕೂಡಾ ವಿಜಯೇಂದ್ರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದಿದ್ದರೇ ಜೆಸಿಬಿ ಪಕ್ಣ ರೆಡಿ ಇದೆ ಎನ್ನುವ ಮಾತುಗಳನ್ನು ಆಡುತ್ತಲೆ ಇರ್ತಾರೆ. ಆದ್ರೆ ಬಿಜೆಪಿ ಮಾತ್ರ ವಿಜಯೇಂದ್ರರನ್ನು ಬದಲಿಸದೇ ಯತ್ನಾಳ ಮಾತಿಗೆ ಕ್ಯಾರೆ ಎಂದಿಲ್ಲಾ. ಬದಲಾಗಿ ಬಿಜೆಪಿ ಯಲ್ಲಿ ಯಡಿಯೂರಪ್ಪ ಕುಟುಂಬ ಮತ್ತಷ್ಟು ಬಲಿಷ್ಠವಾಗತೊಡಗಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಯತ್ನಾಳ 2028 ಕ್ಕೆ ನಾನೇ ಸಿಎಂ ಎಂದು ಘೋಷಿಸಿಕೊಂಡಿದ್ದಾರೆ. ಒಂದು ಕಡೆ ತಮ್ಮ ಜೆಸಿಬಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗಲಿದೆ ಎನ್ನುವ ಮಾತುಗಳನ್ನು ಆಡಿದ್ದಾರೆ. ಇನ್ನೊಂದು ಕಡೆ ತಮ್ಮನ್ನು ಸಿಎಂ ಮಾಡುವದಾದರೇ ಬಿಜೆಪಿಗೆ ಮರಳುವೆ ಎನ್ನುತ್ತಿದ್ದಾರೆ. ಆದ್ರೆ ಬಿಜೆಪಿ ಹೈಕಮಾಂಡ್ ಮಾತ್ರ ಯತ್ನಾಳರ ಯಾವ ಧಮಕಿಗೆ ಪ್ರತಿಕ್ರಿಯೆ ನೀಡಿಲ್ಲಾ. ಬದಲಾಗಿ ವಿಜಯೇಂದ್ರ ವಿರೋಧಿ ಗುಂಪನ್ನು ದೂರವಿರಿಸಿ ವಿಜಯೇಂದ್ರರಿಗೆ ಅನುಕೂಲ ಮಾಡಿ ಕೊಡುವ ಕೆಲಸ ಮಾಡುತ್ತಿದೆ. ಇದು ಯತ್ನಾಳರಿಗೆ ಸಾಕಷ್ಟು ಹಿನ್ನಡೆಯನ್ನು ನೀಡಿದೆ. ಆದ್ರೆ ಮಾದ್ಯಮಗಳ ಮುಂದೆ ಬಂದಾಗಲೆಲ್ಲಾ ನಾನೇ 2028 ರ ಸಿಎಂ ಎನ್ನುವ ಯತ್ನಾಳ ಈಗ ಸಿಕ್ಕಿರುವ ಸದವಕಾಶವನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೇ ಯತ್ನಾಳರರು ತಮ್ಮ ನಿಜವಾದ ತಾಕತ್ತು ತೋರಿಸಿದಂತಾಗುತ್ತದೆ ಎಂದು ಅವರ ಪರ ಹಾಗೂ ವಿರೋಧಿ ಗ್ಯಾಂಗ್ ಗಳು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿವೆ. ಕಡೇ ಪಕ್ಷ ವಿಜಯಪುರ ಪಕ್ಕದ ಜಿಲ್ಲೆ ಬಾಗಲಕೋಟ ಗಾದ್ರೂ ಜೆಸಿಬಿ ಅಭ್ಯರ್ಥಿ ಕಣಕ್ಕಿಳಿಸಿ ತಮ್ಮ ವರ್ಚಸ್ಸು, ತಾಕತ್ತು,ಜನಪ್ರಿಯತೆ ತೋರಲಿ ಎಂಬುದು ಅವರ ಪರ ವಿರೋಧಿಗಳ ಲೆಕ್ಕಾಚಾರವಾಗಿದೆ.
ಒಟ್ಟಾರೆ ಶಾಸಕ ಯತ್ನಾಳ ಸುಪುತ್ರನ ಮದುವೆ ಮೂಡ್ ನಿಂದ ಹೊರ ಬರುವ ಮುಂಚೆಯೇ ಚುನಾವಣೆ ಘೋಷಣೆಯಾಗಿದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಜೆಸಿಬಿ ಅಭ್ಯರ್ಥಿ ಕಣಕ್ಕೆ ಇಳಿಸುತ್ತಾರೆಯೇ ಅಥವಾ ತಟಸ್ಥರಾಗಿ ಉಳಿಯುತ್ತಾರೇಯೆ ಎಂದು ಯತ್ನಾಳರೇ ಉತ್ತರಿಸಬೇಕಿದೆ.
