Vijaypura

ಕರ್ನಾಟಕ ರಾಜ್ಯ ಸರ್ಕಾರಿ ಎಸ್. ಸಿ/ ಎಸ್ .ಟಿ ಸಮನ್ವಯ ಸಮಿತಿಯಿಂದ‌ ವಿವಿಧ ಜಾಗೃತಿ ಕಾರ್ಯಗಳ ಆಯೋಜನೆ

Share

ಕರ್ನಾಟಕ ರಾಜ್ಯ ಸರ್ಕಾರಿ ಎಸ್. ಸಿ/ ಎಸ್ .ಟಿ ಸಮನ್ವಯ ಸಮಿತಿಯಿಂದ‌ ರಾಜ್ಯಾಧ್ಯಕ್ಷ ಡಿ.ಶಿವಶಂಕರ ತಿಳಿಸಿದರು. ಅವರು ರಾಜ್ಯದ ಸರ್ಕಾರಿ ನೌಕರರಲ್ಲಿ ಸೇವಾ ಮನೋಭಾವನೆ ಮತ್ತು ನೈತಿಕ ಮೌಲ್ಯಗಳನ್ನು ಬಲಪಡಿಸಲು ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಭ್ರಷ್ಟಾಚಾರ ಮತ್ತು ಅಸಮತೆಯನ್ನು ಕಡಿಮೆ ಮಾಡಲು ಸಂಘವು ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು. ರಾಜ್ಯದಲ್ಲಿ ಒಟ್ಟು 7,75,000 ಸರ್ಕಾರಿ ಹುದ್ದೆಗಳಿದ್ದು, ಅದರಲ್ಲಿ ಸುಮಾರು 3 ಲಕ್ಷ ಹುದ್ದೆಗಳು ಖಾಲಿಯಾಗಿದೆ. ಕೇವಲ 4 ಲಕ್ಷ ನೌಕರರು ಸೇವೆಯಲ್ಲಿ ಇದ್ದು ಹೆಚ್ಚುವರಿ ಕೆಲಸದ ಒತ್ತಡದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು. ಇನ್ನೂ ಸರ್ಕಾರವು ವಾರ್ಷಿಕ 5,000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತಿಳಿಸಿದ್ದರೂ ಇದುವರೆಗೂ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ಷೇಪಿಸಿದರು. ಹಳೆಯ ಪಿಂಚಣಿ ಯೋಜನೆಯ ಪರಿಣಾಮವಾಗಿ ನೌಕರರು ಒತ್ತಡದಲ್ಲಿದ್ದಾರೆ. ಅದನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಮೇ ತಿಂಗಳಲ್ಲಿ ಬೆಂಗಳೂರು ನಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗುವುದು. ನೌಕರರ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ಶಿವಶಂಕರ ತಿಳಿಸಿದರು.

Tags:

error: Content is protected !!