ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಧಾರವಾಡದ ಜನತೆಗೆ ಇಂದು ವರುಣದೇವ ತಂಪೆರೆದಿದ್ದಾನೆ. ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಯಿಂದಾಗಿ ನಗರದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದರೆ, ಇತ್ತ ರೈತರು ಸಂತಸಪಟ್ಟಿದ್ದಾರೆ.

ಪೇಢಾ ನಗರಿ ಧಾರವಾಡದಲ್ಲಿ ಕಳೆದ ಕೆಲವು ದಿನಗಳಿಂದ ಧಗೆಯಿಂದ ತತ್ತರಿಸಿದ್ದ ಜನತೆಗೆ ಇಂದು ಸಂಜೆ ವರುಣರಾಯ ತಂಪೆರೆದಿದ್ದಾನೆ. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಅಪ್ಪಳಿಸಿದ ಭಾರಿ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು, ಟೋಲ್ ನಾಕಾ ಬಳಿ ವಾಹನ ಸವಾರರು ಸಂಚಾರ ದಟ್ಟಣೆಯಿಂದಾಗಿ ಪರದಾಡುವಂತಾಯಿತು. ಅಕಾಲಿಕ ಮಳೆ ರೈತರ ಪಾಲಿಗೆ ವರದಾನವಾಗಿ ಬಂದು ಅವರ ಮುಖದಲ್ಲಿ ಮಂದಹಾಸ ಮೂಡಿಸಿದರೆ, ಆಲಿಕಲ್ಲು ಮಳೆಯ ತೀವ್ರತೆಗೆ ಹೂ ಬಿಟ್ಟಿರುವ ಮಾವಿನ ಮರಗಳು ಹಾನಿಗೊಳಗಾಗಬಹುದೆಂಬ ಆತಂಕ ಮಾವು ಬೆಳೆಗಾರರಲ್ಲಿ ಮನೆಮಾಡಿದೆ.
