BELAGAVI

ರಾಜಾ ಲಖಮನಗೌಡ ಕಾನೂನು ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ; ವಿದ್ಯಾರ್ಥಿಗಳಿಗೆ ಕಾನೂನಿನ ಪಾಠ!

Share

ಬೆಳಗಾವಿಯ ಪ್ರತಿಷ್ಠಿತ ರಾಜಾ ಲಖಮನಗೌಡ ಕಾನೂನು ಮಹಾವಿದ್ಯಾಲಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ‘ಎಂ. ಕೆ. ನಾಂಬಿಯರ್ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ’ಗೆ ಚಾಲನೆ ದೊರೆತಿದೆ. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಂ. ಜ್ಯೋತಿ ಅವರು, ಅಣಕು ನ್ಯಾಯಾಲಯವು ಕಾನೂನು ವಿದ್ಯಾರ್ಥಿಗಳ ವೃತ್ತಿಪರ ಬೆಳವಣಿಗೆಗೆ ದಿಕ್ಸೂಚಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಬೆಳಗಾವಿಯ ರಾಜಾ ಲಖಮನಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಇಂದಿನಿಂದ ನಾಲ್ಕು ದಿನಗಳ ವರೆಗೆ ಆಯೋಜಿಸಲಾಗಿರುವ ಎಂ. ಕೆ. ನಾಂಬಿಯರ್ ರಾಷ್ಟ್ರ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಕರ್ನಾಟಕ ಉಚ್ಚ ನ್ಯಾಲಯದ ನ್ಯಾಯಮೂರ್ತಿ ಎಂ. ಜ್ಯೋತಿ ಸಂಜೆ ಉದ್ಘಾಟಿಸಿದರು.

ಹಿರಿಯ ನ್ಯಾಯವಾದಿಗಳಾದ ಎ.ಕೆ. ತಗಾರೆ, ಪ್ರದೀಪ ಸಾವ್ಕಾರ, ಆರ್. ಎಸ್.‌ಮುತಾಲಿಕ, ವಿ.ಎನ್. ದೇಶಪಾಂಡೆ, ಎಸ್.ವಿ. ಗಣಾಚಾರಿ ಸೇರಿದಂತೆ ಉಚ್ಚನ್ಯಾಯಾಲಯ ಹಾಗೂ ಜಿಲ್ಲಾ ನ್ಯಾಲಯಗಳ‌‌‌ ನ್ಯಾಯವಾದಿಗಳು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ 30 ಕಾನೂನು ಪದವಿ ಅಧ್ಯಯನದ ವಿದ್ಯಾರ್ಥಿಗಳ ತಂಡ ಪಾಲ್ಗೊಂಡಿದ್ದಾರೆ.

ಬಳಿಕ ಮಾತನಾಡಿದ ನ್ಯಾಯಮೂರ್ತಿ ಎಂ. ಜ್ಯೋತಿ, ಅಣುಕು ನ್ಯಾಯಾಲಯ ಕಾನೂನಿನ ಶಿಸ್ತು ಬದ್ಧ ಶೈಕ್ಷಣಿಕ ಚಟುವಟಿಕೆಯಾಗಿದೆ. ಕಾನೂನಿನ ಸೈದ್ಧಾಂತಿಕ ತಿಳುವಳಿಕೆ ಮೂಡಿಸುತ್ತದೆ. ನಿರ್ಲಿಪ್ತತೆಯ ಶಿಸ್ತನ್ನು ಮತ್ತು ಕಾನೂನು ವಾದಗಳ ಉತ್ಸುಕತೆಗೆ ಕಾರಣವಾಗುತ್ತದೆ. ನ್ಯಾಯಪರ ವಾದಗಳ ಹಾಗೂ ಸಂಶೋಧನೆ ನ್ಯಾಯಾಲಯದ ವಿಶ್ವಾಸ ವೃದ್ಧಿಗೆ ಕಾರಣವಾಗುತ್ತವೆ‌ ಎಂದು ತಿಳಿಸಿದರು.

ಹಿರಿಯ ನ್ಯಾಯವಾದಿ ಪ್ರದೀಪ ಸಾವ್ಕಾರ, ಅಣುಕು ನ್ಯಾಯಾಲಯ ಸ್ಪರ್ದೆಗಳು ಕಾನೂನಿಯ ಸರಿಯಾದ ತಿಳುವಳಿ, ಆಳವಾದ ಅಧ್ಯಯನ, ವೃತ್ತಿಪರ ಗೌರವವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

Tags:

error: Content is protected !!