ಬೆಳಗಾವಿಯಲ್ಲಿ ಹೆಚ್ಚುತ್ತಿರುವ ಇರಾನ್ ಮುಖಂಡ ಅಲಿ ಖಮೇನಿ ಭಾವಚಿತ್ರಗಳನ್ನು ಕೂಡಲೇ ಪೊಲೀಸ್ ಇಲಾಖೆ ತೆರವುಗೊಳಿಸಬೇಕು. ಇಲ್ಲದಿದ್ದರೇ, ನಗರದಲ್ಲಿ ಅಫ್ಜಲ್’ಖಾನ್ ವಧೆ ಮಾಡಿದ ಛತ್ರಪತಿ ಶಿವಾಜೀ ಮಹಾರಾಜರು, ಮತ್ತು ಖಮೇನಿ ವಧೆ ಮಾಡಿದ ಇಸ್ರೇಲ್ ಪಿಎಂ ನೇತ್ಯಾನಹೂ ಭಾವಚಿತ್ರಗಳಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸುತ್ತೇವೆ. ತಾಕತ್ತಿದ್ದರೇ ತೆರವುಗೊಳಿಸಿ ತೋರಿಸಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು ಕೇರಳ-2 ಚಲನಚಿತ್ರವನ್ನು ಮಹಿಳೆಯರು, ಯುವತಿಯರು ಮತ್ತು ಮಕ್ಕಳನ್ನು ಕರೆದುಕೊಂಡು ಚಲನಚಿತ್ರಗ್ರಹಕ್ಕೆ ಹೋಗಿ ಪ್ರತಿಯೊಬ್ಬರು ವಿಕ್ಷೀಸಬೇಕು. ಇದೊಂದು ಮನೋರಂಜನಾತ್ಮಕ ಚಿತ್ರವಲ್ಲದೇ, ಇದರಲ್ಲಿ ಹಿಂದು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಲವ್ ಜಿಹಾದ್’ನನ್ನು ತೋರಿಸಿದ ವಾಸ್ತವಾಂಶದ ಆಧಾರಿತ ಚಲನಚಿತ್ರವಾಗಿದೆ. ಶ್ರೀರಾಮಸೇನೆಯೂ ಲವ್ ಜಿಹಾದ್ ತಡೆಗಟ್ಟಲೂ ಸಹಾಯಣವಾಣಿ ಪ್ರಾರಂಭಿಸಿ 2 ವರ್ಷಗಳು ಗತಿಸಿದ್ದು, ಸುಮಾರು 2 ಸಾವಿರ ಕರೆಗಳು ಬಂದಿವೆ. ಅದರಲ್ಲಿ ಶೇ. 75 ರಷ್ಟು ಸಮಸ್ಯೆಯನ್ನು ಶ್ರೀರಾಮಸೇನೆಯೂ ಇತ್ಯರ್ಥ್ಯಗೊಳಿಸಲಾಗಿದೆ ಎಂದರು.
ಇನ್ನು ಕುಂಭಮೇಳದಲ್ಲಿ ಮೊನಾಲಿಸಾ ಎಂದು ಸುಪ್ರಸಿದ್ಧಗೊಂಡಿದ್ದ ರುದ್ರಾಕ್ಷಿ ಮಾರುತ್ತಿದ್ದ ಯುವತಿಯನ್ನು ಫರ್ಮಾನ್ ಖಾನ್ ಎಂಬಾತ ಮದುವೆಯಾಗಿದ್ದಾನೆ. ಕೇರಳ ಮತಾಂತರದ ಕೇಂದ್ರಬಿಂದುವಾಗಿದೆ. ಮೊನಾಲಿಸಾ ಎಂದು ಪ್ರಸಿದ್ಧಿಯನ್ನು ಪಡೆದ ಯುವತಿಯೊಂದಿಗೂ ಮುಂದೊಂದು ದಿನ ಅನ್ಯಾಯವಾಗುವುದು ನಿಶ್ಚಿತ ಎಂದರು.
ಇನ್ನು ಕಿತ್ತೂರು ರಾಣಿ ಚೆನ್ನಮ್ಮಳನ ಸ್ಮಾರಕವನ್ನು ಅಭಿವೃದ್ಧಿ ವಿಚಾರದಲ್ಲಿ ಬಜೆಟ್’ನಲ್ಲಿ ಅನುದಾನ ನೀಡದ ವಿಚಾರವಾಗಿ ದೇಶಕ್ಕಾಗಿ ಹೋರಾಡಿದ ಪ್ರಥಮ ಮಹಿಳೆಗೆ ಜಾತಿ ರಾಜಕಾರಣ ತಂದು ಅಪಮಾನ ಮಾಡುತ್ತಿದ್ದಾರೆ. ಮಹಾಪುರುಷರ ಬಗ್ಗೆ ಅವಹೇಳನ ಸರಿಯಲ್ಲ. ರಾಣಿ ಚೆನ್ನಮ್ಮಳ ಸ್ಮಾರಕ್ಕಾಗಿ ನಡೆಯುತ್ತಿರುವ ಧರಣಿಗೆ ನಮ್ಮ ಬೆಂಬಲವಿದೆ ಎಂದರು. ಇನ್ನು ಖಮೇನಿ ಚಿತ್ರ ತೆಗೆಯಲು ಮೀನಮೇಷ ಎನಿಸುತ್ತಿರುವ ಸರ್ಕಾರ ಮತ್ತು ಪೊಲೀಸರ ವಿರುದ್ಧ ತೀವ್ರ ಕಿಡಿಕಾರಿದರು. ಕೂಡಲೇ, ಅದನ್ನ ತೆರವುಗೊಳಿಸಿ, ಇಲ್ಲದಿದ್ದರೇ ನಾವು ಛತ್ರಪತಿ ಶಿವಾಜೀ ಮಹಾರಾಜರು ಮತ್ತು ಇಸ್ರೇಲ್ ಪಿಎಂ ನೇತ್ಯಾನಹೂ ಭಾವಚಿತ್ರ ಹಾಕುತ್ತೇವೆ. ತಾಕತ್ತಿದರೇ ತೆಗೆದು ತೋರಿಸಿ ಎಂದು ಸವಾಲು ಹಾಕಿದರು.
ಇನ್ನು ಶ್ರೀರಾಮನವಮಿ, ಯುಗಾದಿ ಸೇರಿದಂತೆ ಇನ್ನುಳಿದ ಹಬ್ಬ ಹರಿದಿನಗಳಿಗಾಗಿ ಹಿಂದೂಗಳಿಂದಲೇ ವಸ್ತುಗಳನ್ನು ಖರೀದಿಸಬೇಕೆಂದರು. ಈ ಸಂದರ್ಭದಲ್ಲಿ ಶ್ರೀರಾಮಸೇನೆ ಬೆಳಗಾವಿ ಜಿಲ್ಲಾಧ್ಯಕ್ಷ ರವಿಕುಮಾರ್ ಕೋಕಿತಕರ, ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.
