State

ಸಂಪುಟ ಪುನಾರಚನೆಯಾಗಬೇಕು. ನಾವು ಮಂತ್ರಿಯಾಗಬೇಕು

Share

ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನಾರಚನೆಯ ಕೂಗು ಮತ್ತೆ ಜೋರಾಗಿದೆ. ಕೆಲ ಸಚಿವರು ಕೈಗೆ ಸಿಗುತ್ತಿಲ್ಲ ಎಂಬ ಅಸಮಾಧಾನದ ನಡುವೆಯೇ, ರಾಮದುರ್ಗ ಶಾಸಕ ಅಶೋಕ್ ಪಟ್ಟಣ್ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಸಂಪುಟ ಪುನಾರಚನೆಯಾಗಬೇಕು. ನಾವು ಮಂತ್ರಿಯಾಗಬೇಕು ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮದುರ್ಗ ಶಾಸಕ ಅಶೋಕ್ ಪಟ್ಟಣ್ ಅವರು, ಎಲ್ಲ ಸಚಿವರ ಬಗ್ಗೆ ನಮಗೆ ಅಸಮಾಧಾನವಿಲ್ಲ. ಕೆಲ ಸಚಿವರು ಮಾತ್ರ ಯಾರ ಕೈಗೂ ಸಿಗುವುದಿಲ್ಲ. ಹೈಕಮಾಂಡ್ ಅವರು ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಪುನಾರಚನೆಯ ಭರವಸೆಯನ್ನು ನೀಡಿದ್ದರು. ಆದರೇ ಈಗ 3 ವರ್ಷ ಗತಿಸುತ್ತಾ ಬಂದಿದ್ದು, ಆದಷ್ಟು ಬೇಗ ಸಚಿವ ಸಂಪುಟವನ್ನು ಪುನಾರಚಿಸಬೇಕು. 34 ಜನರು ಶಾಸಕರು ಇದ್ದು, ಸುಮಾರು 22 ಜನರಿಗೆ ಸಚಿವ ಸ್ಥಾನವನ್ನು ನೀಡಬೇಕು. ಸಂಪುಟ ಪುನಾಚರಣೆಯಾಗಬೇಕು. ನಾವು ಮಂತ್ರಿಗಳಾಗಬೇಕು. ಅಧಿವೇಶನ ಹಿನ್ನೆಲೆ ಮಾರ್ಚ್ 26 ರಂದು 25-30 ಜನ ದೆಹಲಿಗೆ ತೆರಳಿ ಹೈಕಮಾಂಡ್’ಗೆ ಮನವಿ ಮಾಡಲಾಗುವುದು ಎಂದರು.

Tags:

error: Content is protected !!