Chikkodi

ನಿಪ್ಪಾಣಿಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆಯವರ ಅಭಿವೃದ್ಧಿ ಕಾರ್ಯಗಳನ್ನ ಮೆಚ್ಚಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

Share

ಭಿಮಾಪುರವಾಡಿ ಸತೀಶ ಕೊಂಡೆಕರ,ವಿಶಾಲ ಸೂರ್ಯವಂಶಿ,ಉದಯ ಬೇಳೆಕರ ಹಾಗೂ ಅವರ ತಂಡದ 20ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು.

ಚಿಕ್ಕೋಡಿ:ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಹಾಗೂ ನಿಪ್ಪಾಣಿ ಕ್ಷೇತ್ರದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ನಿಪ್ಪಾಣಿ ಮತಕ್ಷೇತ್ರದ ಭಿಮಾಪೂರವಾಡಿ ಗ್ರಾಮದ ಸತೀಶ ಕೊಂಡೆಕರ, ವಿಶಾಲ ಸೂರ್ಯವಂಶಿ,ಉದಯ ಬೇಳೆಕರ, ತುಷಾರ ಕೋಂಡೇಕರ, ಕೇದಾರ ಸೂರ್ಯವಂಶಿ, ಕುಬೇರ ಕೊಂಡೆಕರ, ರೋಹನ ಚವ್ಹಾಣ,ಪ್ರಥಮೇಶ ಬೇಳೆಕರ, ಉದಯ ಕೊಂಡೆಕರ, ರಂಜಿತ ಕೊಂಡೆಕರ,ಅಜಿತ ಕೊಂಡೆಕರ, ಗಣೇಶ ಮೊರೆ, ಪ್ರಕಾಶ ಸಾಳುಂಕೆ, ಹಾಗೂ ಅವರ ತಂಡದ 20 ಕ್ಕಿಂತ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು,ಅವರನ್ನು ಮಾಜಿ ಸಚಿವೆ‌-ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರು ಆತ್ಮೀಯವಾಗಿ ಭಾರತೀಯ ಜನತಾ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಬಾಳಾಸಾಹೇಬ ಕದಂ, ಸಿದ್ದು ನರಾಟೆ ಹಾಲಶುಗರ ನಿರ್ದೇಶಕರಾದ ಶ್ರೀಕಾಂತ ಬನ್ನೇ,ಭರತ ನಸಲಾಪುರೆ,ಬಾಳಾಸಾಹೇಬ ಸದಲಗೆ,ಮಿಥುನ ಪಾಟೀಲ,ಅರುಣ ಬಿಲವಾಡೆ,ಬಾಬಾಸಾಹೇಬ ಜಾಧವ, ಅಲಗೊಂಡ ಪಾಟೀಲ,ಭರತ ಘೋಸರವಾಡೆ,ರೇಖಾ ಘೋಸರವಾಡೆ ಉಪಸ್ಥಿತರಿದ್ದರು.

Tags:

error: Content is protected !!