ವಿಜಯಪುರ ಜಿಲ್ಲೆಯಲ್ಲಿ ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ, ವಾಣಿಜ್ಯ ಉದ್ದೇಶದ ಸಿಲಿಂಡರ್ ಕೊರತೆಯೂ ಅಷ್ಟೊಂದು ಪ್ರಮಾಣದಲ್ಲಿ ಇಲ್ಲ,ಜನತೆ ಭಯ ಪಡುವ ಅಗತ್ಯವಿಲ್ಲ, ನೈಸರ್ಗಿಕ ಇಂಧನಗಳನ್ನು ಮಿತವಾಗಿ ಬಳಸುವುದು ಉತ್ತಮ ಎಂದು ಅಡುಗೆ ಅನಿಲ ಪೂರೈಕೆಯ ಉದ್ಯಮದಲ್ಲಿ ಅನೇಕ ವರ್ಷಗಳಿಂದ ತೊಡಗಿರುವ ಸಾಯಿ ಹೋಮ್ ನಿಡ್ಸ್ ಮುಖ್ಯಸ್ಥ ಹಾಗೂ ಬಿಜೆಪಿ ಯುವ ಮುಖಂಡ ಉಮೇಶ ಕಾರಜೋಳ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಮೇರಿಕಾ ಹಾಗೂ ಇರಾನ್ ನಡುವೆ ಯುದ್ದ ನಡೆದಿದೆ, ಈ ಯುದ್ಧದಂತಹ ಸಂದರ್ಭದಲ್ಲಿ ಪೆಟ್ರೋಲ್, ಡಿಸೈಲ್, ಅಡುಗೆ ಅನೀಲದಂತಹ ಇಂಧನಗಳ ಪೂರೈಕೆಯಲ್ಲಿ ವ್ಯತ್ಯಯ ಸಹಜ, ಯುದ್ದ ನಾಲ್ಕೈದು ದಿನದಲ್ಲಿ ಸಮಾಪ್ತಿಯಾಗಬಹದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಯುದ್ದ ಮುಂದುವರೆಯಿತು, ಈ ಹಿಂದೆ ಕೋವಿಡ್ ವೇಳೆ ಆಮ್ಲಜನಕ ಕೊರತೆ ಉಂಟಾದಾಗ ವೈದ್ಯಕೀಯ ಉದ್ದೇಶಕ್ಕಾಗಿ ಮೊದಲ ಆದ್ಯತೆ ನೀಡಲಾಗಿತ್ತು, ಕೈಗಾರಿಕಾ ಬಳಕೆಗೆ ಕಡಿವಾಣ ಹಾಕಲಾಗಿತ್ತು. ಅದೇ ತೆರನಾಗಿ
ಈಗ ಗೃಹ ಬಳಕೆಯ ಸಿಲಿಂಡರ್ ಒತ್ತು ನೀಡಲಾಗಿದೆ, ಅಂದ ಮಾತ್ರಕ್ಕೆ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯೂ ಸಂಪೂರ್ಣವಾಗಿ ನಿಂತಿಲ್ಲ, ಅದರ ಪ್ರಮಾಣದ ತಗ್ಗಿಸಲಾಗಿದೆ, ಗೃಹ ಬಳಕೆ ಸಿಲಿಂಡರ್ ಪ್ರಥಮಾದ್ಯತೆ ನೀಡಲಾಗಿದೆ, ಗೃಹ ಬಳಕೆ ಸಿಲಿಂಡರ್ ಒಂದು ತಿಂಗಳುಗಳ ಕಾಲ ಉಪಯೋಗವಾಗುತ್ತವೆ, ವಿಜಯಪುರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಗೃಹ ಬಳಕೆ ಸಿಲಿಂಡರ್ ಸ್ಟಾಕ್ ಇವೆ, ಹೀಗಾಗಿ ಜನತೆ ಆತಂಕ ಪಡುವ ಯಾವ ಅಗತ್ಯವೂ ಇಲ್ಲ, ಈ ನೈಸರ್ಗಿಕ ಇಂಧನಗಳನ್ನು ಹಿತಮಿತವಾಗಿ ಬಳಕೆ ಮಾಡುವುದೇ ಇದಕ್ಕೆ ಪರಿಹಾರ.
ಕೇಂದ್ರ ಸರ್ಕಾರ ಸಮರ್ಥ ಆಡಳಿತ ನಿರ್ವಹಣೆ ಫಲವಾಗಿ ಯಾವ ಗಂಭೀರವಾದ ಕೊರತೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.
