BELAGAVI

ಬೆಳಗಾವಿಯ 27 ಸಕ್ಕರೆ ಕಾರ್ಖಾನೆಗಳ ಸಾವಿರ ಸಾವಿರ ಕೋಟಿ ಕಬ್ಬಿನ ಬಿಲ್ ಬಾಕಿ!!!

Share

ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಕಬ್ಬು ಬೆಳೆಗಾರರು ತಮ್ಮ ಬಾಕಿ ಹಣಕ್ಕಾಗಿ ಬೀದಿಗಿಳಿದಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬಾಕಿ ಹಣಕ್ಕಾಗಿ, ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಬೆಳಗಾವಿಯ ಸಕ್ಕರೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯ ಸಕ್ಕರೆ ಆಯುಕ್ತರ ಕಚೇರಿ ಆವರಣ ಇಂದು ರೈತರ ಪ್ರತಿಭಟನೆಯ ತಾಣವಾಯಿತು. ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಜಮಾಯಿಸಿದ ನೂರಾರು ರೈತರು, ಮೂರು ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಬಾಕಿ ಹಣವನ್ನು ತಕ್ಷಣ ಪಾವತಿಸಬೇಕೆಂದು ಪಟ್ಟು ಹಿಡಿದರು. ಪ್ರತಿ ಟನ್‌ ಕಬ್ಬಿಗೆ 3,300 ರೂಪಾಯಿ ದರ ನಿಗದಿ ಮಾಡಿದ್ದರೂ, ಕಾರ್ಖಾನೆ ಮಾಲೀಕರು ಹಣ ಪಾವತಿಸದೆ ರೈತರನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ರೈತರ ಬಾಕಿ ಬಗ್ಗೆ ಮಾಹಿತಿ ನೀಡಬೇಕೆಂದು ಪಟ್ಟು ಹಿಡಿದರು. (ಫ್ಲೋ)

ಸಕ್ಕರೆ ಕಾರ್ಖಾನೆಗಳ ಬಾಕಿ ಬಿಲ್ಲಿನ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತ ಬೆಳಗಾವಿ ಜಿಲ್ಲೆಯ 29 ಸಕ್ಕರೆ ಕಾರ್ಖಾನೆಗಳಲ್ಲಿ 2 ಕಾರ್ಖಾನೆಗಳು ಶೇ. 100 ರಷ್ಟು ಹಣವನ್ನು ನೀಡಿವೆ. ಬಾಕಿ 27 ಸಕ್ಕರೆ ಕಾರ್ಖಾನೆಗಳ 1554 ಕೋಟಿ 47 ಲಕ್ಷ ಬಾಕಿ ಇದೆ ಎಂದರು.

ಈ ವೇಳೆ ಮಾತನಾಡಿದ ಚೂನ್ನಪ್ಪ ಪೂಜೇರಿ ಅವರು ಕಾರ್ಖಾನೆಗಳ ಮಾಲೀಕರು ಉದ್ದೇಶಪೂರ್ವಕವಾಗಿ ಬಾಕಿ ಹಣವನ್ನು ಉಳಿಸಿಕೊಂಡಿದ್ದಾರೆ, ಸರ್ಕಾರ ಮಧ್ಯಪ್ರವೇಶಿಸಿ ತಕ್ಷಣ ಹಣ ಪಾವತಿ ಮಾಡಿಸಬೇಕು, ಇಲ್ಲವಾದಲ್ಲಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದು ಆಗ್ರಹಿಸಿದರು. ಪ್ರಭಾವಿ ವ್ಯಕ್ತಿಗಳ ಸಕ್ಕರೆ ಕಾರ್ಖಾನೆಗಳಿಂದ ರೈತರ ಬಾಕಿ ಇದೆ. ಇದರಿಂದಾಗಿ 10 ಲಕ್ಷ ಜನರು ಕಣ್ಣೀರು ಹಾಕುತ್ತಿದ್ದಾರೆ. ಕಬ್ಬು ಪೂರೈಸಿದ ರೈತರಿಗೆ 14 ದಿನಗಳಲ್ಲಿ ಬಾಕಿ ಮಾಡಬೇಕಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿ, ಇಂದು ಬಾಕಿ ತೆಗೆದುಕೊಂಡೆ ಹೋಗುತ್ತೇವೆ ಎಂದರು.

ಇನ್ನೋರ್ವ ರೈತ ಹೋರಾಟಗಾರರು ರೈತರ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳ ವಿರುದ್ಧ ಯಾವ ಕ್ರಮಕೈಗೊಂಡಿದ್ದೀರಿ? ಬ್ಯಾಂಕಿನವರು ಕಬ್ಬು ಬೆಳೆಯಲು ಸಾಲ ಪಡೆದ ರೈತರಿಗೆ ನೋಟಿಸುಗಳು ಬಂದಿವೆ. ಕಬ್ಬು ಕಳುಹಿಸಿ 3 ತಿಂಗಳಾದರೂ ಹಣ ಬಂದಿಲ್ಲ. ಬ್ಯಾಂಕಿಗೆ 18 ತಿಂಗಳ ಬಡ್ಡಿ ಹೇಗೆ ಭರಿಸುವುದು ಎಂದು ಪ್ರಶ್ನಿಸಿದರು.

ರೈತರ ಉಗ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಆಯುಕ್ತರ ಕಚೇರಿ ಬಳಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಸಕಾಲಕ್ಕೆ ಬಿಲ್ ಸಿಗದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!