ಅದ್ಯಾಕೋ ಎನೋ ನಮ್ಮ ನಡುವೆ ಇರುವ ಕೆಲವು ಜನರಿಗೆ ರಸ್ತೆಗಳು ಸರಿ ಇರುವುದೇ ದೊಡ್ಡ ಸಮಸ್ಯೆ ಅನ್ನಿಸುತ್ತದೆ. ವಾಹನಗಳ ಸುಗಮ ಸಂಚಾರಕ್ಕೆ ರಸ್ತೆ ನಿರ್ಮಿಸಿದ್ದರೆ. ಅದನ್ನು ತಮ್ಮಗೆ ಬೇಕಾದ ರೀತಿಯಲ್ಲಿ, ಇಲಾಖೆಗಳ ಪರವಾನಿಯೂ ಪಡೆಯದೇ ಅಗೆದು ಹಾಳು ಮಾಡುತ್ತಿದ್ದಾರೆ. ಇದಕ್ಕೆ ಧಾರವಾಡ ವಾರ್ಡ್ ನಂಬರ್ 16 ಜೈ ಭೀಮ ನಗರ ಮುಖ್ಯ ರಸ್ತೆ ಇಲಿಗಲ್ ಕಟ್ಟಿಂಗ್ ಸಾಕ್ಷಿಯಾಗಿದೆ.

ಹೌದು …. ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ವ್ಯಾಪ್ತಿಯ ಧಾರವಾಡ ವಾರ್ಡರ್ ನಂಬರ್16ನೇಯ ಜೈ ಭೀಮ್ ನಗರದ ಮುಖ್ಯ ರಸ್ತೆಯನ್ನು ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಯನ್ನು ಸಿಸಿ ರಸ್ತೆಯಾಗಿ ನಿರ್ಮಿಸಿದ್ದರು. ಆದರೆ ಇಲ್ಲೊಬ್ಬ ನಿವಾಸಿ ಪಾಲಿಕೆಯ ಅನುಮತಿಯನ್ನು ಪಡೆಯದೇ ಅಕ್ರಮವಾಗಿ ರಸ್ತೆ ಕಟ್ಟಿಂಗ್ ಮಾಡಿದ್ದಾರೆ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಜತೆಗೆ ವಾಹನ ಸಂಚಾರಕ್ಕೆ ಇದು ಅಡೆತಡೆ ಉಂಟು ಮಾಡುತ್ತಿದ್ದು, ಇವರು ಮುಂಜಾನೆ ಅಂದರೆ ವಾಹನ ಸಂಚಾರ ಸಮಯದಲ್ಲಿ ತಮ್ಮಗೀಷ್ಟ ಬಂದಹಾಗೆ ರಸ್ರೆ ಅಗೆಯುವ ಮೂಲಕ ಜನರಿಗೆ ತೊಂದರೆ ನೀಡುತ್ತಿದ್ದು, ಪಾಲಿಕೆಯ ಅಧಿಕಾರಿಗಳು ಯಾಕೆ ಈ ನಿರ್ಲಕ್ಷ್ಯ ತೋರುತ್ತದೆ ಎಂಬುವುದು ಜನರ ಪ್ರಶ್ನೆಯಾಗಿದೆ. ಈಗಲಾದ್ರೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಈ ಬಗ್ಗೆ ಎಚ್ಚೆತ್ತುಕೊಂಡು ಕಠಿಣ ಕ್ರಮ ಕೈಗೊಳ್ಳುತ್ತಾರೋ ಇಲ್ವೋ ಎಂಬುವುದು ಕಾದು ನೋಡಬೇಕಾಗಿದೆ.
