ರಾಜ್ಯ ರಾಜಕಾರಣದಲ್ಲಿ ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಯ ಚರ್ಚೆ ಜೋರಾಗಿ ನಡೀತಾ ಇದೆ. ಅದರಲ್ಲೂ ವಿಶೇಷವಾಗಿ ಬೆಳಗಾವಿ ಜಿಲ್ಲೆಗೆ ಅಥವಾ ಗೋಕಾಕ್ ನಾಯಕರಿಗೆ ಈ ಪಟ್ಟ ಒಲಿಯುತ್ತಾ ಎಂಬ ಕುತೂಹಲ ಕಾಂಗ್ರೆಸ್ ವಲಯದಲ್ಲಿ ಮನೆ ಮಾಡಿದೆ. ಈ ಬೆನ್ನಲ್ಲೇ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ಪರೋಕ್ಷವಾಗಿ ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ. ‘ಸ್ಥಾನ ಸಿಕ್ಕಾಗ ನೋಡೋಣ, ಆ ಬಗ್ಗೆ ಚರ್ಚೆ ಮಾಡೋಣ’ ಎನ್ನುವ ಮೂಲಕ ಸಚಿವರು ಕುತೂಹಲದ ಎಳೆಯನ್ನು ಹಾಗೆಯೇ ಉಳಿಸಿದ್ದಾರೆ.


ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು , ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೆಳಗಾವಿಗೆ ಸಿಗುತ್ತದೆ. ಗೋಕಾಕಿನವರಿಗೆ ಈ ಸ್ಥಾನ ಸಿಗಲಿದೆ ಎಂಬ ಚರ್ಚೆ ಕಾಂಗ್ರೆಸ್ ಪಾಳೆಯದಲ್ಲೇ ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಿಕ್ಕಾಗ ನೋಡೋಣ. ಚರ್ಚೆ ಮಾಡೋಣ ಎಂದರು. ಡಿನ್ನರ್ ಪಾರ್ಟಿಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಹೈಕಮಾಂಡಮಟ್ಟದಲ್ಲಿ ಯಾವುದೇ ನಿರ್ಣಯವಾಗಿಲ್ಲ. ದೆಹಲಿಗೆ ಹೋದಾಗಲೂ ನೇತೃತ್ವ ಬದಲಾವಣೆ ಗೊಂದಲ ಇತ್ಯರ್ಥ್ಯಗೊಳಿಸಲು ಹೇಳಲಾಗಿದೆ ಎಂದರು.

ಮಹಾನಗರ ಪಾಲಿಕೆಯ ಸಭೆಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಸುಮಾರು 60 ಸಾವಿರ ಮತದಾರರು ಕಾಣೆಯಾಗಿರುವ ಬಗ್ಗೆ ಕೇಳಿ ಬಂದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಕಾಣೆಯಾಗಿಲ್ಲ. ಇನ್ನು ಪ್ರಕ್ರಿಯೆ ನಡೆಯುತ್ತಿದೆ. ಮೂರು-ಮೂರು ಬಾರಿ ಮನೆಗೆ ಹೋಗಿ ಪರಿಶೀಲಿಸಲಾಗುತ್ತಿದೆ. ಮತದಾರರನ್ನು ಹುಡುಕುವುದು ಅಧಿಕಾರಿಗಳ ಜವಾಬ್ದಾರಿ ಎಂದರು. ಮುಂದಿನ ಭಾನುವಾರ ಮತ್ತೇ ಸಭೆಯನ್ನು ಕರೆಯಲಾಗಿದೆ ಎಂದರು. ಮ್ಯಾಪಿಂಗ್ ಪ್ರಕ್ರಿಯೆ ಜಾರಿಯಲ್ಲಿದ್ದು, ಇನ್ನು ಶೇ. 5 ರಷ್ಟು ಪ್ರಕ್ರಿಯೆ ಪೂರ್ಣಗೊಂಡರೇ ಎಲ್ಲವು ಮುಗಿದಂತೆ ಎಂದರು.
ಇನ್ನು ಎಲ್.ಪಿ.ಜಿ ಏಮರ್ಜೆನ್ಸಿ ಬಗ್ಗೆ ಮಿತವಾಗಿ ಸಿಲಿಂಡರ್ ಬಳಸಬೇಕು. ಇದೊಂದೆ ಪರಿಹಾರ. ತೊಂದರೆಯಂತೂ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಲು ನಕಾರ ವ್ಯಕ್ತಪಡಿಸಿದರು. ಕಬ್ಬು ಬೆಳೆಗಾರರ 500 ಕೋಟಿ ಬಾಕಿ ಕೊಟ್ಟೇ ಕೊಡುತ್ತಾರೆ. ಆರ್ಥಿಕ ಲಭ್ಯತೆ ಆಧಾರದ ಮೇಲೆ ಹಣ ನೀಡಲಾಗುತ್ತದೆ. ಆರ್ಥಿಕವಾಗಿ ಸಬಲರಾದವರೂ ಈಗಾಗಲೇ ನೀಡಿದ್ದಾರೆ ಎಂದರು.
ಸಿಟಿಸ್ 2 ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆಯೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದಾರೆ ಎಂದರು. ಇನ್ನು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗೆ ಬರಬೇಕಾದ 24 ಕೋಟಿ ಹಣವನ್ನು ಬಿಡುಗಡೆಗೆ ತಡವಾಗಿದ್ದು, ಈ ಕುರಿತು ಗಮನ ಸೆಳೆಯಲಾಗುವುದು ಎಂದರು.
