ಬೆಳಗಾವಿಯ ಬಸವಣ ಕುಡಚಿಯ ಚನ್ನಮ್ಮಾ ಬಸವಂತಯ್ಯಾ ಹಿರೇಮಠ ವೃದ್ಧಾಶ್ರಮದಲ್ಲಿ ಸರ್ವಲೋಕ ಸೇವಾ ಫೌಂಡೇಶನ್ ಮತ್ತು ಕರ್ನಾಟಕ ಪೊಲೀಸ್ ದಳದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಕೆ.ಎಸ್.ಆರ್.ಪಿ.ಸಿ ಕ್ಯಾಂಪಸನಲ್ಲಿರುವ ಶ್ರೀ ದುರ್ಗಾಮಾತಾ ದೇವಾಲಯದಲ್ಲಿ ಭಕ್ತರು ಸಮರ್ಪಿಸಿದ ಸೀರೆಗಳನ್ನು ವೃದ್ಧಾಶ್ರಮದ ತಾಯಂದಿರಗೆ ಮತ್ತು ಸಹೋದರಿಯರಿಗೆ ವಿತರಿಸಲಾಯಿತು. ಸುಮಾರು 250 ಜನರು ಇದರ ಸದುಪಯೋಗವನ್ನು ಪಡೆದುಕೊಂಡರು. ಇದೇ ವೇಳೆ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಮಾರ್ಗದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ವೀರೇಶ್ ಹಿರೇಮಠ, ಮಲ್ಲಪ್ಪ ಗುರಾಯಿ, ಸುಭಾಷ್ ಮೂರಕುಟೆ, ವಿಶ್ವನಾಥ ಕುರಪಿ, ಬಸವರಾಜ್ ಮಡಿವಾಳ, ಎಂ.ಎಸ್. ಚೌಗಲಾ, ಗೌರೀಶ್ ಹಿರೇಮಠ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
