BELAGAVI

ಬೆಳಗಾವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Share

ಸಮಾಜದ ಬದಲಾವಣೆಗೆ ಮಹಿಳೆಯರ ಪಾತ್ರವೇ ಅಡಿಪಾಯವಾಗಿದ್ದು, ಬದಲಾವಣೆ ನಮ್ಮ ಮನೆಯಿಂದಲೇ ಆರಂಭವಾಗಲಿ ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತೀಕ್ ಎಂ. ಹೇಳಿದರು.

ಇಂದು ಬೆಳಗಾವಿಯ ಮಹಾನಗರ ಪಾಲಿಕೆಯ ವತಿಯಿಂದ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ವೇದಿಕೆಯ ಮೇಲೆ ಮಹಾಪೌರ ಮಂಗೇಶ್ ಪವಾರ್, ಉಪಮಹಾಪೌರರಾದ ವಾಣಿ ಜೋಷಿ, ಆಡಳಿತ ಪಕ್ಷದ ನಾಯಕ ಹಣುಮಂತ ಕೊಂಗಾಲಿ, ಮಾಜಿ ಮಹಾಪೌರರಾದ ಸವೀತಾ ಕಾಂಬಳೆ, ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತೀಕ್ ಎಂ., ಉಪಾಯುಕ್ತರಾದ ಉದಯಕುಮಾರ್ ತಳವಾರ, ಸಿದ್ಧು ಹುಲ್ಲೋಳ್ಳಿ, ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ, ಸ್ಮಾರ್ಟ್ ಸಿಟಿ ಎಂ.ಡಿ. ಸೇರಿದಂತೆ ಇನ್ನುಳಿದ ಗಣ್ಯರು ಉಪಸ್ಥಿತರಿದ್ಧರು. ಉಪಸ್ಥಿತ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಉತ್ತಮ ಸೇವೆ ಸಲ್ಲಿಸಿದ ಮತ್ತು ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಅದೇ ರೀತಿ ಕೆ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುಮೀತ್ ಮೋಟೆಕರ ಅವರನ್ನು ಸಹ ಸನ್ಮಾನಿಸಲಾಯಿತು.

ಈ ವೇಳೆ ಆಡಳಿತ ಪಕ್ಷದ ನಾಯಕ ಹಣುಮಂತ ಕೊಂಗಾಲಿ ಅವರು ಮಹಿಳೆಯರಿಗೆ ಬಸವಣ್ಣನವರ ಕಾಲದಿಂದಲೇ ಉನ್ನತ ಸ್ಥಾನವನ್ನು ನೀಡಿದೆ. ಮನೆಯಾಗಲಿ ಸಮಾಜವಾಗಲಿ ಎಲ್ಲವನ್ನು ಸುಧಾರಿಸುವ ಶಕ್ತಿ ಮಹಿಳೆಯರಲ್ಲಿದೆ ಎಂದರು.

ಜಗದೀಶ್ ಹಿರೇಮನಿ ಅವರು ಶೇ. 50 ರಷ್ಟು ಎಲ್ಲ ಕ್ಷೇತ್ರದಲ್ಲಿ ಮಹಿಳೆಯರನ್ನು ಮುಂಚೂಣಿಗೆ ತರಬೇಕಾದರೇ, ಅದಕ್ಕೆ ಬೇಕಾದ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಿದೆ. ನಮ್ಮ ದೇಶದ ಮಹಿಳೆಯರು ಮನಸ್ಸು ಮಾಡಿದರೇ, ಅಸಾಧ್ಯವಾದ್ದನ್ನು ಸಾಧ್ಯ ಮಾಡಿ ತೋರಿಸಬಹುದು. ಎಲ್ಲ ರಂಗದಲ್ಲಿಯೂ ಮಹಿಳೆಯರು ಸಾಧನೆಯನ್ನು ಮಾಡಿದ್ದಾರೆ. ಸ್ವಚ್ಛ ಭಾರತ ಅಭಿಯಾನದಲ್ಲಿಯೂ ಮಹಿಳೆಯ ಪ್ರಮುಖ ಪಾತ್ರವಿದೆ. ಮಹಿಳೆಯರು ಮಹಾಪಾಲಿಕೆ ಕೈ ಜೋಡಿಸಿದರೇ, ಸ್ವಚ್ಛ ಬೆಳಗಾವಿ ಯೋಜನೆಯನ್ನು ಯಶಸ್ವಿಗೊಳಿಸಬಹುದಾಗಿದೆ ಎಂದರು.

ಮಹಾನಗರ ಪಾಲಿಕೆಯ ಆಯುಕ್ತರಾದ ಕಾರ್ತಿಕ್ ಎಂ. ಅವರು, ಮಹಿಳೆಯರಿಲ್ಲದ ಜೀವನ ಊಹಿಸಿಕೊಳ್ಳಲು ಕೂಡ ಅಸಾಧ್ಯ. ಮಹಿಳೆಯರ ಪಾತ್ರ ಜೀವನದಲ್ಲಿ ಅತ್ಯಂತ ಪ್ರಮುಖವಾಗಿದ್ದು, ಸಮಾಜದ ಅನೇಕ ಕ್ಷೇತ್ರದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ರಾಷ್ಟ್ರಪತಿ ಸ್ಥಾನದಲ್ಲಿರುವ ದ್ರೌಪದಿ ಮುರ್ಮು ಅವರೇ ಸಾಕ್ಷಿ. ಮೊದಲಿನ ಕಾಲದಲ್ಲಿ ವೈಯಕ್ತಿಕ, ಆರೋಗ್ಯ, ಕೌಟುಂಬಿಕ ಹೀಗೆ ಹಲವು ಸಮಸ್ಯೆಗಳು ಮಹಿಳೆಯರನ್ನು ಉತ್ತುಂಗಕ್ಕೆ ಬೆಳೆಯಲು ಬಿಡುತ್ತಿರಲಿಲ್ಲ. ಆದರೇ ಈಗ ಕಾಲ ಬದಲಾಗಿದೆ. ಅವರ ಸಮಸ್ಯೆಗಳನ್ನು ಸವಾಲುಗಳನ್ನು ದೂರ ಮಾಡಿ ಮಹಿಳೆಯರನ್ನು ಬೆಳೆಯಲು ಅವಕಾಶ ಮಾಡಿಕೊಡಬೇಕು. ಇದನ್ನ ನಮ್ಮ ಮನೆಯಿಂದಲೇ ಆರಂಭಿಸಬೇಕೆಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸಿಬ್ಬಂದಿ ಮತ್ತು ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!