ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಕಾಗವಾಡ ತಾಲೂಕಿನ ಸುಕ್ಷೇತ್ರ ಮಂಗಸೂಳಿ ಗ್ರಾಮದ ಶ್ರೀ ಮಾರ್ತಂಡ (ಮಲ್ಲಯ್ಯ) ದೇವಸ್ಥಾನ,
ಮುಖ್ಯ ದೇವರ ಶಿಖರ ಕಟ್ಟಡ ಜೀರ್ಣೋದ್ಧಾರ
ಮತ್ತು ಕಳಸಾರೋಹಣ ಕಾರ್ಯಕ್ರಮ ರವಿವಾರ, ದಿನಾಂಕ : 15 ರಂದು ಮುಂಜಾನೆ 11-30 ಗಂಟೆಗೆ ಜರುಗಲಿದೆ.

ಇದರ ನಿಮಿತ್ಯವಾಗಿದಿ. ಶುಕ್ರವಾರ 13 ರಂದು ಗ್ರಾಮದ ಪ್ರಮುಖ ಮಾರ್ಗಗಳ ಮುಖಾಂತರ ಕಳಸದ ಮೆರವಣಿಗೆ ಹಮ್ಮಿಕೊಂಡಿದ್ದಾರೆ.
ಶನಿವಾರ ದಿನಾಂಕ 14 ರಂದು ಪ. ಪೂ. ಅಭಿನವ ಶ್ರೀ ಸಚ್ಚಿದಾನಂದ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು, ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಮಠ, ಸಂಕೇಶ್ವರ-ಕರವೀರ.
ಇವರ ಸಾನಿಧ್ಯದಲ್ಲಿ ಧಾರ್ಮಿಕ ವಿಧಿ ವಿಧಾನ, ಹೋಮ-ಹವನಗಳ ಮುಖಾಂತರ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಪವಿತ್ರ ಕಾರ್ಯಕ್ರಮಕ್ಕೆ ಸಕಲ ಸದ್ಭಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಶ್ರೀ ಮಲ್ಲಯ್ಯನ ಕೃಪಾಶೀರ್ವಾದ ಪಡೆದುಕೊಳಿರಿ. ಎಂದು ದೇವಸ್ಥಾನ ಸಮಿತಿ ಟ್ರಸ್ಟಿಗಳಾದ ಉಜ್ವಲ್ ಸಿಂಗ್ ಪವರ್ ದೇಸಾಯಿ, ವಿಕ್ರಾಂತ್ ಪವಾರ್ ದೇಸಾಯಿ ಮಯೂರ್ ಪವರ್ ದೇಸಾಯಿ. ಸದ್ಭಕ್ತರು, ಅರ್ಚಕರು ಆಹ್ವಾನಿಸಿದ್ದಾರೆ.
