Dharwad

ಧಾರವಾಡ ವಿಷಯುಕ್ತ ಹೊಗೆ ನಿಯಂತ್ರಣಕ್ಕೆ ಆಗ್ರಹಿಸಿ ಶಿವಸೇನೆ ಪ್ರತಿಭಟನೆ.

Share

ಧಾರವಾಡ ಜನ್ನತ ನಗರದ ಬಳಿಯಲ್ಲಿರುವ ಕಸ ವಿಲೇವಾರಿ ಘಟಕದಲ್ಲಿನ ಕಸದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ವಿಷಯುಕ್ತ ಹೊಗೆ ಧಾರವಾಡ ನಗರದ ವಿವಿಧ ಕಡೆಗಳಲ್ಲಿ ಹರಡಿಕೊಂಡು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದರು ಅಧಿಕಾರಿಗಳು ಶಾಶ್ವತ ಪರಿಹಾರ ನೀಡಲು ವಿಫಲವಾಗಿರುವುದನ್ನು ಖಂಡಸಿ ಹಾಗೂ ಕೂಡಲೇ ಸಮಸ್ಯೆ ಒರಿಹಾರಕ್ಕೆ ಆಗ್ರಹಿಸಿ, ಶಿವ ಸೇನೆ ಪದಾಧಿಕಾರಿಗಳು ಬೀದಿಗೆ ಇಳಿದು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಶಿವಸೇನೆ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲಿಕೆ ಸೇರಿ ಜಿಲ್ಲಾಡಳಿತ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಧಾರವಾಡ ಹೊಸ ಯಲ್ಲಾಪುರ ರುದ್ರಭೂಮಿಗೆ ಹೊಂದಿಕೊಂಡಿರುವ ತ್ಯಾಜ್ಯ ವಿಲೇವಾರಿ ಘಟಕವಿದ್ದು, ಈ ಗಯಡ್ಡದಲ್ಲಿನ ಕಸಕ್ಕೆ ಕಿಡಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ. ಈ ಕಸದ ಬೆಂಕಿಯ ವಿಷಮ ಹೋಗೆಯು ಸುತ್ತಮುತ್ತಲಿನ ಟೋಲ್ ನಾಖಾ, ವಿದ್ಯಾಗಿರಿ, ಲಕ್ಷ್ಮೀ ನಗರ, ಜನ್ನತ್ ನಗರ, ಹೊಸ ಯಲ್ಲಾಪೂರ, ನವಲೂರ ಆಗಸಿ, ಯಾಲಕ್ಕಿ ಶೆಟ್ಟರ್ ಕಾಲೊನಿ, ಶಿವಾನಂದ ನಗರ, ಚಪ್ಪರ ಬಂದ್ ಕಾಲೊನಿ, ರಾಮನಗರ ಸುತ್ತಲಿನ ಪ್ರದೇಶದಲ್ಲಿನ ಜನರು ನಿತ್ಯವು ನರಕ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ‌. ಇತ್ತೀಚೆಗೆ ಕಳೆದ ಮೂರು ದಿನಗಳಿಂದ ಕಸದ ಗುಡ್ಡಕ್ಕೆ ಬೆಂಕಿ ಬಿದ್ದು, ವಿಷಮ ಹೋಗೆಯಿಂದ ಜನ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಇಷ್ಟಾದರೂ ಕೂಡಾ ಪಾಲಿಕೆ ಜಿಲ್ಲಾಡಲಕಿತ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಒತ್ತು ನೀಡದೇ ಇರುವುದು ವಿಪರ್ಯಾಸ. ಕೂಡಲೇ ಶಾಶ್ವತ ಪರಿಹಾರಕ್ಕೆ ಜಿಲ್ಲಾಡಳಿತ ಹಾಗೂ ಪಾಲಿಕೆ ಮುಂದಾಗಬೇಕು ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

Tags:

error: Content is protected !!