BELAGAVI

ಮಾ.13 ರಿಂದ 16ನೇ ಎಂ.ಕೆ. ನಂಬಿಯಾರ್ ಸ್ಮಾರಕ ಅಣುಕು ನ್ಯಾಯಾಲಯ ಸ್ಪರ್ಧೆ;ಆರ್.ಎಸ್.ಮುತಾಲಿಕ್

Share

ಬೆಳಗಾವಿ ತಿಲಕವಾಡಿಯ ಆರ್.ಎಲ್ ಕಾನೂನು ವಿದ್ಯಾಲಯದಲ್ಲಿ ಮಾ.13 ರಿಂದ 16ನೇ ಎಂ.ಕೆ. ನಂಬಿಯಾರ್ ಸ್ಮಾರಕ ರಾಷ್ಟ್ರೀಯ ಮಟ್ಟದ ಅಣುಕು ನ್ಯಾಯಾಲಯದ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆರ್.ಎಸ್.ಮುತಾಲಿಕ್ ಹೇಳಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 9 ರಾಜ್ಯಗಳಿಂದ ಸುಮಾರು 30 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯದ ವಕೀಲರು ಮತ್ತು ಅಕಾಡೆಮಿಕ್ ವಲಯದವರು ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಅಣುಕು ನ್ಯಾಯಾಲಯದ ಸ್ಪರ್ಧಾರ್ಥಿಗಳನ್ನು ನಿರ್ಣಾಯಕರಾಗಲಿದ್ದಾರೆ ಎಂದರು.

ಸ್ಪರ್ಧೆಯ ವಿವಿಧ ವಿಭಾಗಗಳ ವಿಜೇತರಿಗೆ ಒಟ್ಟು 1.35 ಲಕ್ಷ ಮೌಲ್ಯದ ಬಹುಮಾನಗಳು ನೀಡಲಾಗುತ್ತದೆ. ಜೊತೆಗೆ ಬೆಳಗಾವಿಯ ವಕೀಲ ಅಶೋಕ ಪೋತದಾರ ಅವರ ಹೆಸರಿನಲ್ಲಿ ಉತ್ತಮ ಅಣುಕು ಪ್ರಶಸ್ತಿ ನೀಡಿ 6,000 ನಗದು ಬಹುಮಾನ ನೀಡಲಾಗುತ್ತದೆ ಎಂದರು.

ಉದ್ಘಾಟನಾ ಸಮಾರಂಭವು ಮಾ.13ರಂದು ಸಂಜೆ 5.30ಕ್ಕೆ ತಿಕೆಎಲ್‌ಎಸ್ ಪ್ಲಾಟಿನಮ್ ಜುಬಿಲಿ ಕಟ್ಟಡದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಹೈಕೋರ್ಟ ನ್ಯಾಯಮೂರ್ತಿ ಜ್ಯೋತಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರದೀಪ್ ಸಾಹುಕಾರ ವಹಿಸಲಿದ್ದಾರೆ ಎಂದರು.
ಎಸ್.ಬಿ.ಗಣಾಚಾರಿ, , ಡಾ. ಎ.ಎಚ್.ಕಬಾಡಿ, ಅಶ್ಬಿನಿ ಪರಬ್, ಸುನೀರಿ ಜೋಶಿ ಉಪಸ್ಥಿತರಿದ್ದರು.

Tags:

error: Content is protected !!