Vijaypura

ಶ್ರಿಶೈಲದಿಂದ ಮರಳುತ್ತಿದ್ದ ಬೈಕ್ ಗೆ ಕಾರ್ ಡಿಕ್ಕಿ ಸ್ಥಳದಲ್ಲಿ ಬೈಕ್‌ ಸವಾರ ಸಾವು

Share

ವಿಜಯಪುರ ತಾಲೂಕಿನ ಕುಮಟಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ, ಶ್ರೀಶೈಲಕ್ಕೆ ಹೋಗಿ ಬರುತ್ತಿದ್ದ ಭಕ್ತಾದಿಗಳ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹಣಮಂತ ನಾಟೀಕಾರ ಎಂಬ ವ್ಯಕ್ತಿ ಮೃತಪಟ್ಟ ದುರ್ಸೈವಿಯಾಗಿದ್ದು ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ನಿಡೋಣಿ ಗ್ರಾಮದ ವ್ಯಕ್ತಿಯಾಗಿದ್ದಾರೆ. ಹತ್ತು ದ್ವಿಚಕ್ರ ವಾಹನಗಳಲ್ಲಿ ಶ್ರೀಶೈಲಕ್ಕೆ ತೆರಳಿದ್ದರು. ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ‌. ವಿಜಯಪುರ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Tags:

error: Content is protected !!