BELAGAVI

ಕೆ.ಎಲ್.ಎಸ್ ಪಾಲಿಟೆಕ್ನಿಕ್‌ನಲ್ಲಿ ನಡೆದ ‘ಟೆಕ್-ರೀನ್‌ಫೋರ್ಸ್ 2K26’: ‘CAD ಕ್ಲಾಶ್’ ಸ್ಪರ್ಧೆಯಲ್ಲಿ ಮರಾಠಾ ಮಂಡಲ ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ

Share

ಬೆಳಗಾವಿಯ ಕೆ.ಎಲ್.ಎಸ್ ವಸಂತರಾವ್ ಪೋತದಾರ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಿದ್ದ ‘ಟೆಕ್-ರೀನ್‌ಫೋರ್ಸ್ 2K26’ ತಾಂತ್ರಿಕ ಉತ್ಸವದಲ್ಲಿ ಬೆಳಗಾವಿಯ ಮರಾಠಾ ಮಂಡಲ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಮಿಂಚಿದ್ದಾರೆ. ಸಿವಿಲ್ ವಿಭಾಗದ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ದ್ವಿತೀಯ ಬಹುಮಾನವನ್ನು ಬಾಚಿಕೊಂಡಿದ್ದಾರೆ.
ಕಳೆದ ಮಾರ್ಚ್ 10 ಮತ್ತು 11 ರಂದು ನಡೆದ ಈ ರಾಜ್ಯಮಟ್ಟದ ತಾಂತ್ರಿಕ ಸ್ಪರ್ಧೆಯಲ್ಲಿ, ಮರಾಠ ಮಂಡಲ ಪಾಲಿಟೆಕ್ನಿಕ್‌ನ ಸಿವಿಲ್ ವಿಭಾಗದ ವಿದ್ಯಾರ್ಥಿಗಳಾದ ಮೊಹಮ್ಮದ್ ಇಶ್ರಕ್ ಗೋರಿಖಾನ್ ಮತ್ತು ಮೊಹಮ್ಮದ್ ಇಸ್ಮಾಯಿಲ್ ರಂಗರೇಜ್ ಅವರು ‘CAD ಕ್ಲಾಶ್’ (CAD CLASH) ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯು ಪಾಲಿಟೆಕ್ನಿಕ್‌ನ ಶಿಕ್ಷಣ ಗುಣಮಟ್ಟ ಮತ್ತು ಅವರ ಸೃಜನಾತ್ಮಕ ಪ್ರತಿಭೆಗೆ ಸಾಕ್ಷಿಯಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಮರಾಠ ಮಂಡಲ ಸಮೂಹ ಸಂಸ್ಥೆಗಳ ಅಧ್ಯಕ್ಷೆ ಡಾ. ರಾಜಶ್ರೀ ನಾಗರಾಜು, ಆಡಳಿತ ಮಂಡಳಿ, ಪ್ರಾಂಶುಪಾಲ ಆರ್.ಎಸ್. ಸೂರ್ಯವಂಶಿ, ಉಪ ಪ್ರಾಂಶುಪಾಲೆ ಆಶಾ ತೋರವಿ, ಸಿವಿಲ್ ವಿಭಾಗದ ಮುಖ್ಯಸ್ಥ ಸಿ.ಎಸ್. ದೇಶಪಾಂಡೆ, ಹಾಗೂ ಉಪನ್ಯಾಸಕರಾದ ಲಲಿತಾ ಶಿವಶಿಂಪಿರ್, ಅಬಾಜಿ ಹುಂದ್ರೆ ಮತ್ತು ಪ್ರಶಾಂತ್ ಮುಸಳೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿದ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Tags:

error: Content is protected !!