ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ರಾಜ್ಯದಲ್ಲಿ ಎಲ್.ಪಿ.ಜಿ. ಸಿಲಿಂಡರ್‌ಗಳ ಅಭಾವ ತಲೆದೋರಿದ್ದು, ಇದು ಹೊಟೇಲ್ ಉದ್ಯಮ ಹಾಗೂ ಸಾರ್ವಜನಿಕರ ಮೇಲೆ ಭಾರಿ ಪರಿಣಾಮ ಬೀರಿದೆ. ಈ ಕುರಿತು ಇಂದು ವಿಧಾನ ಸಭೆಯಲ್ಲಿ ನಡೆದ ಚರ್ಚೆಯು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವಿನ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಯಿತು.

ವಿಧಾನಸಭೆಯಲ್ಲಿ ಕುಣಿಗಲ್ ಶಾಸಕ ಡಾ.ಎಚ್.ಡಿ ರಂಗನಾಥ್ ಅವರು ಯುದ್ಧದ ಹಿನ್ನೆಲೆ ಎಲ್.ಪಿ.ಜಿ. ಅಭಾವ ತಲೆದೋರಿದ್ದು, ರಾಜ್ಯದ ಜನರು ಮತ್ತು ಹೋಟೆಲ್ ಉದ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಿದೆ. ಹೊಟೇಲ್’ಗಳ ಮೇಲೆ ಅವಲಂಬಿತರು ಸಂಕಷ್ಟಕ್ಕಿಡಾಗಿದ್ದಾರೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು. ಆದರೇ ಈ ವೇಳೆ ಆಹಾರ ಸಚಿವರು ಇಲ್ಲದ ಕಾರಣ ನಂತರ ಉತ್ತರ ಕೊಡಿಸುವುದಾಗಿ ಸಭಾಧ್ಯಕ್ಷರು ತಿಳಿಸಿದರು. ಇದಕ್ಕೆ ಮುಖ್ಯಮಂತ್ರಿಗಳು ಉತ್ತರಿಸಬೇಕೆಂದರು.
ಇದಕ್ಕೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಯುದ್ಧದ ಹಿನ್ನೆಲೆ ಪರರಾಷ್ಟ್ರಗಳಿಂದ ಇಂಧನ ಪೂರೈಕೆ ವ್ಯತ್ಯಯದ ಹಿನ್ನೆಲೆ ಸದ್ಯ ಗೃಹಬಳಕೆಗೆ 25 ದಿನಕ್ಕಾಗಿ ಒಂದು ಸಿಲಿಂಡರ್ ಪೂರೈಸಲಾಗುತ್ತಿದೆ. ಈಗಾಗಲೇ ಸಂಬಂಧಿಸಿದ ವಿಭಾಗಗಳೊಂದಿಗೆ ಸಭೆಯನ್ನು ನಡೆಸಲಾಗಿದೆ. ವಿನಾಃಕಾರಣ ಸಿಲಿಂಡರ್ ಬಳಕೆ ಮಾಡಬಾರದು ಎಂದರು.
ಈ ವೇಳೆ ಮತ್ತೇ ಮಾತನಾಡಿದ ಶಾಸಕ ಡಾ.ಎಚ್.ಡಿ ರಂಗನಾಥ್ ಇದಕ್ಕೆ ಪಿಎಂ ಮೋದಿ ಸರ್ಕಾರದ ದುರ್ಬಳಕೆಯ ವಿದೇಶಾಂಗ ನೀತಿ ಎಂದು ಹೇಳುತ್ತಲೇ ಪಕ್ಷ-ವಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಈ ವೇಳೆ ಮಾತನಾಡಿದ ಸಿಎಂ ಸಿದ್ಧರಾಮಯ್ಯನವರು ಇಂದೇ ಸಭೆಯನ್ನು ನಡೆಸಲಾಗಿದೆ. ಆಯಿಲ್ ಕಂಪನಿಗಳು ಹೇಳಿದ್ದನ್ನು ಆಹಾರ ಸಚಿವರು ಸ್ಪಷ್ಟಪಡಿಸುತ್ತಿದ್ದಾರೆ. ಇಂಧನಗಳನ್ನು ಪೂರೈಸುವುದು ಕೇಂದ್ರ ಸರ್ಕಾರ ಎಂದರು. ಈ ವೇಳೆ ಶಾಸಕ ಸುನೀಲ್ ಕುಮಾರ್ ಯುದ್ಧದ ಸಮಯದಲ್ಲಿನ ವ್ಯತ್ಯಯವನ್ನು ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರ ಸರ್ವರ್ ಸಮಸ್ಯೆಯನ್ನು ಪರಿಹರಿಸುವ ಯೋಗ್ಯತೆಯಿಲ್ಲ ಎಂದರು. ಇದಕ್ಕೆ ಸಿಎಂ ಸಿದ್ಧರಾಮಯ್ಯ ಅವರು ಸಿಲಿಂಡರ್’ಗಳ ಬೆಲೆ ಏರಿಸುವ ಕೇಂದ್ರ ಸರ್ಕಾರಕ್ಕೂ ಯೋಗ್ಯತೆಯಿಲ್ಲ ಎಂದರು.
ವಾಗ್ವಾದಗಳ ಬಳಿಕ ಮತ್ತೇ ಮಾತು ಮುಂದುವರೆಸಿದ ಆಹಾರ ಸಚಿವೆ ಕೆ.ಎಚ್. ಮುನಿಯಪ್ಪ ಅವರು ಒಂದು ಕುಟುಂಬಕ್ಕೆ ಒಂದೇ ಸಿಲಿಂಡರ್ ನೀಡಲಾಗುವುದು. ಕರಾಳ ಸಂತೆಗೆ ಯಾವುದೇ ಅವಕಾಶವಿಲ್ಲ. ಕರಾಳ ಸಂತೆಗೆ ಮುಂದಾದರೇ, ಕ್ರಮಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಕಮರ್ಷಿಯಲ್ ಸಿಲಿಂಡರ್ ನೀಡಲಾಗುವುದು. ದೇಶ ಕಷ್ಟದಲ್ಲಿರುವಾಗ ಹೊಟೇಲ್ ಮತ್ತು ಕಲ್ಯಾಣ ಮಂಟಪದವರು ಸಹಕರಿಸಬೇಕು ಎಂದರು.
