State

ಮಹಿಳಾ ಸಬಲೀಕರಣಕ್ಕೆ ಸರ್ಕಾರ ನಿರ್ಲಕ್ಷ್ಯ: ‘ಉದ್ಯೋಗಿನಿ’ ಯೋಜನೆ ಫಲಿತಾಂಶ ಕುರಿತು ಸದನದಲ್ಲಿ ಶಾಸಕ ಸಿದ್ಧು ಸವದಿ ಕಿಡಿ

Share

ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಜಾರಿಯಲ್ಲಿರುವ ‘ಉದ್ಯೋಗಿನಿ’ ಯೋಜನೆಯ ಅನುಷ್ಠಾನದಲ್ಲಿ ಭಾರಿ ಲೋಪಗಳಾಗುತ್ತಿರುವ ಕುರಿತು ವಿಧಾನಪರಿಷತ್‌ನಲ್ಲಿ ತೀವ್ರ ಚರ್ಚೆ ನಡೆದಿದೆ. ಯೋಜನೆಯಡಿ ಬಂದಿರುವ ಸಾವಿರಾರು ಅರ್ಜಿಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಸಹಾಯಧನ ತಲುಪಿದ್ದು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ತೇರದಾಳ ಶಾಸಕ ಸಿದ್ಧು ಸವದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ ತೇರದಾಳ ಶಾಸಕ ಸಿದ್ಧು ಸವದಿ ಅವರು ಮಹಿಳಾ ಸಬಲೀಕರಣಕ್ಕಾಗಿ ಉದ್ಯೋಗಿನಿ ಯೋಜನೆಯಡಿ 3 ವರ್ಷದ ಅಂಕಿ ಸಂಖ್ಯೆಗಳನ್ನು ನೋಡಿದರೇ, ರಾಜ್ಯದಲ್ಲಿ ಒಟ್ಟು 83, 813 ಅರ್ಜಿಗಳು ಸಲ್ಲಿಕೆಯಾಗಿದ್ದು, 1480 ಮಂಜೂರಯಾಗಿವೆ. ಅದರಲ್ಲಿ ಕೇವಲ 87 ಜನರಿಗೆ ಸಹಾಯಧನವನ್ನು ನೀಡಲಾಗಿದೆ. ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಇದು ಆಯಾ ಸ್ಥಳೀಯರ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ಮತ್ತು ಜಾರಿಯಾಗುತ್ತದೆ. ಇದನ್ನ ಶಾಸಕರು ಶೀಘ್ರವಾಗಿ ಆಯ್ಕೆ ಮಾಡಬೇಕು. ಹಲವಾರು ಬ್ಯಾಂಕುಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ಸಿವ್ಹಿಲ್ ಕೋರ್ಸ್ ಆಧಾರದ ಮೇಲೆ ಅದನ್ನು ಪರಿಗಣಿಸಲಾಗುತ್ತಿದೆ. ಶಾಸಕರು ಆಯ್ಕೆಯಾದವರಲ್ಲೇ ಸುಮಾರು ಶೇಕಡಾ 60 ರಷ್ಟು ಅರ್ಜಿಗಳು ಮರಳಿ ಬರುತ್ತಿವೆ. 8-9 ತಿಂಗಳ ವರೆಗೆ ಬ್ಯಾಂಕುಗಳು ಅರ್ಜಿಗಳನ್ನು ಇಟ್ಟುಕೊಳ್ಳುತ್ತಿವೆ. ಈಗಾಗಲೇ ಈ ಕುರಿತು ಬ್ಯಾಂಕರ್ಸ್’ಗಳ ಸಭೆಯನ್ನು ನಡೆಸಲಾಗಿದ್ದು, ಸರಳಿಕೃತ ಪ್ರಕ್ರಿಯೆಯನ್ನು ಜಾರಿಗೊಳಿಸಲು ಕ್ರಮಕೈಗೊಳ್ಳಲಾಗಿದೆ. 2 ತಿಂಗಳೊಳಗೆ ಎರಡು ವರ್ಷಗಳ ಫಲಾನುಭವಿಗಳಿಗೆ ಅರ್ಜಿಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದರು.

Tags:

error: Content is protected !!