State

ಜೆಜೆಎಂ ಯೋಜನೆಯಲ್ಲಿ ಕಳಪೆ ಕಾಮಗಾರಿ ಆರೋಪ: ಶಾಸಕ ದುರ್ಯೋಧನ ಐಹೊಳೆ ಆಕ್ರೋಶ, ತನಿಖೆಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

Share

ವಿಧಾನಸಭೆ ಅಧಿವೇಶನದಲ್ಲಿ ‘ಜಲಜೀವನ್ ಮಿಷನ್’ (JJM) ಯೋಜನೆಯ ಅನುಷ್ಠಾನದ ವೈಫಲ್ಯದ ಬಗ್ಗೆ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯೋಜನೆ ಮುಗಿದು 3 ವರ್ಷ ಕಳೆದರೂ ನೀರು ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿದ್ದು, ಈ ವಿಚಾರ ಸದನದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಯಿತು.

ವಿಧಾನಸಭೆಯ ಅಧಿವೇಶನದಲ್ಲಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರು ಚುಕ್ಕೆ ಗುರುತಿನ ಪ್ರಶ್ನೆಯನ್ನು ಜೆಜೆಎಂ ಯೋಜನೆಯಡಿ ಎಷ್ಟು ಗ್ರಾಮಗಳಿಗೆ ಕೊಳವೆಬಾವಿ ಕೊರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಶ್ನಿಸಿದರು. ಕಾಮಗಾರಿ ಮುಗಿದು 3 ವರ್ಷವಾದರೂ ಅಳವಡಿಸಿದ ಪೈಪುಗಳಿಗೆ ನಳಗಳನ್ನು ಹಾಕಿಲ್ಲ. ನೀರು ಕೂಡ ಬರುತ್ತಿಲ್ಲ. ಬೋರ್ ಹಾಕಿದರೂ ನೀರಿಲ್ಲ. ಕೂಡಲೇ ಕಳಪೆ ಮಟ್ಟದ ಕಾಮಗಾರಿ ಕೈಗೊಂಡ ಗುತ್ತಿಗೆದಾರರು ಮತ್ತು ಅಧಿಕಾರಗಳ ಮೇಲೆ ಕ್ರಮಕೈಗೊಂಡ ಕಾಮಗಾರನ್ನು ದುರಸ್ಥಿಗೊಳಿಸಬೇಕೆಂದರು. ಇದಕ್ಕೆ ಹಲವು ಶಾಸಕರು ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೀರಿಲ್ಲದೇ ಈ ಯೋಜನೆ ಅನುಮೋದಿಸಲು ಆಗುವುದಿಲ್ಲ. ಕೆಲವೆಡೆ ನೀರು ಬತ್ತಿ ಹೋಗಿರಬಹುದು. ಶಿಥಿಲಗೊಂಡ ಮತ್ತು ಜಲಮೂಲವಿಲ್ಲ ಎಂಬುದಾಗಿದ್ದರೇ ಪರಿಶೀಲಿಸಿ ತಾಂತ್ರಿಕ ಸಮಸ್ಯೆಯನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು. ಈಗಾಗಲೇ 16 ಕೋಟಿ ರೂಪಾಯಿ ಇದಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದರು.

Tags:

error: Content is protected !!