ಅಕ್ರಮವಾಗಿ ಹಸುಗಳು ಸಾಗಟದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬಜರಂಗದಳದ ಕಾರ್ಯಕರ್ತರು 24 ಗೋವುಗಳ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಧಾರವಾಡದ ಸುಳ್ಳ ಮಾರ್ಗವಾಗಿ ಶಿವಳ್ಳಿ ರಸ್ತೆಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಟಾಟಾ ಐಸರ್ ವಾಹನವನ್ನು ಬೆನ್ನಟ್ಟಿದ್ದ ಬಜರಂಗದಳದ ಕಾರ್ಯಕರ್ತರು, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯವರಿಗೆ ಮಾಹಿತಿ ನೀಡಿ ವಾಹನ ತಡೆದಿದ್ದಾರೆ. ಬೆಳಗಾವಿ ನೋಂದಣಿ ಹೊಂದಿರುವ ವಾಹನ ಪರಿಶೀಲಿಸಿದ ಬಳಿಕ ಲಾರಿಯಲ್ಲಿ 24ಗೋವುಗಳು ಇರುವುದು ಪತ್ತೆಯಾಗಿದೆ. ಬಳಿಕ ಸ್ಥಳಕ್ಕೆ ಬಂದ ಗ್ರಾಮೀಣ ಠಾಣೆಯ ಪೊಲೀಸರು ಸದ್ಯ ವಾಹನವನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
