ನಗರದ ಸೂರಣ್ಣವರ ಆಸ್ಪತ್ರೆ ಆಧುನಿಕ ಅಸ್ಥಿ ಚಿಕಿತ್ಸಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ರೋಬೋಟಿಕ್ ಜಾಯಿಂಟ್ ಮರು ಜೋಡಣೆ ಮಾಡಲು ಯಶಸ್ವಿಯಾಗಿದೆ ಎಂದು ಆಸ್ಪತ್ರೆ ವೈದ್ಯ ಡಾ.ಜಗದೀಶ್ ಸೂರಣ್ಣವರ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಲ್ಲಿಯವರೆಗೆ 200 ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 3,500 ಜಾಯಿಂಟ್ ಮರು ಜೋಡಣೆ ಮಾಡಲಾಗಿದೆ ಎಂದ ಅವರು, ರೋಬೋಟಿಕ್ ನಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಶಸ್ತ್ರಚಿಕಿತ್ಸೆಯ ವೆಚ್ಚ, ನೋವು ಕಡಿಮೆ ಇರುತ್ತದೆ. ಇದರ ಲಾಭವನ್ನು ಜನರು ಪಡೆದುಕೊಳ್ಳಬೇಕು ಎಂದರು.
ಸಾಧನೆಯೊಂದಿಗೆ ಸುರಣ್ಯವರ ಆಸ್ಪತ್ರೆ ಉತ್ತರ ಕರ್ನಾಟಕದ ರೋಗಿಗಳಿಗೆ ರೋಬೋಟಿಕ್ ಸಹಾಯದ ಅಸ್ತಿ ಶಸ್ತ್ರ ಚಿಕಿತ್ಸೆಯನ್ನು ಪರಿಚಯಿಸಿದ ಮುಂಚೂಣಿ ಆಸ್ಪತ್ರೆಗಳಲ್ಲೊಂದು ಆಗಿದೆ. ಇದರ ಪರಿಣಾಮವಾಗಿ ರೋಗಿಗಳು ಅತ್ಯಾಧುನಿಕ ಸಂಧಿ ಬದಲಾವಣೆ ಚಿಕಿತ್ಸೆಗೆ ಮೆಟ್ರೋ ನಗರಗಳಿಗೆ ಪ್ರಯಾಣಿಸುವ ಅಗತ್ಯ ಕಡಿಮೆಯಾಗುತ್ತದೆ ಎಂದರು.

ಮಹತ್ವದ ಬೆಳವಣಿಗೆಯಲ್ಲಿ ಸುರಣ್ಣವರ ಆಸ್ಪತ್ರೆ ಉತ್ತರ ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ತರಬೇತಿ ಫೆಲೋಶಿಪ್ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದಡಿ ವಿವಿಧ ದೇಶಗಳ ಅಸ್ಥಿ ತಜ್ಞರು ಇಲ್ಲಿ ಭೇಟಿ ನೀಡಿ ಸಂಧಿ ಬದಲಾವಣೆ ಮತ್ತು ಟ್ರಾಮಾ ಶಸ್ತ್ರಚಿಕಿತ್ಸೆಗಳ ಉನ್ನತ ತಂತ್ರಗಳನ್ನು ಕಲಿಯುತ್ತಿದ್ದಾರೆ ಎಂದರು.
ಮೊದಲ ಫೆಲೋ ಆಗಿ ಯೂರೋಪಿನ ರೊಮೇನಿಯಾ ದೇಶದ ಡಾ. ಡಾಗೋಸ್ ಮಿರೋಸು ಅವರು ಇಲ್ಲಿ ಬಂದು ಫೆಲೋಶಿಪ್ ಪ್ರಾರಂಭಿಸಿದ್ದಾರೆ. ಸಾಮಾನ್ಯವಾಗಿ ಭಾರತೀಯ ವೈದ್ಯರು ಯೂರೋಪಿಗೆ ತೆರಳಿ ಅಸ್ಥಿ ಚಿಕಿತ್ಸೆಯನ್ನು ಕಲಿಯುತ್ತಾರೆ. ಆದರೆ ಯೂರೋಪಿನ ಶಸ್ತ್ರಚಿಕಿತ್ಸಕರು ಭಾರತಕ್ಕೆ. ವಿಶೇಷವಾಗಿ ಬೆಳಗಾವಿಯ ಸುರಣ್ಣವರ ಆಸ್ಪತ್ರೆಗೆ ಬಂದು ಅತ್ಯಾಧುನಿಕ ಚಿಕಿತ್ಸೆ ತಂತ್ರಗಳನ್ನು ಕಲಿಯುತ್ತಿರುವುದು ಭಾರತ ಮತ್ತು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದರು.
ನವೀನತೆ ಮತ್ತು ಉತ್ತಮ ರೋಗಿ ಸೇವೆಗೆ ಬದ್ಧತೆಯ ಭಾಗವಾಗಿ, ಆಸ್ಪತ್ರೆಯಲ್ಲಿ ಈಗಾಗಲೇ ಸುಮಾರು 10 ಅಪರೂಪದ ಮತ್ತು ಸಂಕೀರ್ಣ ಅಸ್ಥಿ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನೆರವೇರಿಸಲಾಗಿದೆ. ಇವುಗಳಲ್ಲಿ ಹಲವು ಶಸ್ತ್ರಚಿಕಿತ್ಸೆಗಳು ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆದಿವೆ. ಈ ಸಾಧನೆಗಳು ಸಂಕೀರ್ಣ ಅಸ್ತಿ ಸಮಸ್ಯೆಗಳನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಆಸ್ಪತ್ರೆಯ ಪರಿಣತಿಯನ್ನು ತೋರಿಸುತ್ತವೆ ಎಂದರು.
ಡಾ. ಸುಮಿತ್ ಪಾಟೀಲ್, ಡಾ. ಜಾಫರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
