State

ಇ ಖಾತಾ ಲಂಚದ ಆರೋಪಕ್ಕೆ ಡಿಸಿಎಂ ಡಿಕೆಶಿ ಕೆಂಡಾಮಂಡಲ

Share

ರಾಜ್ಯದಲ್ಲಿ ‘ಇ-ಖಾತಾ’ ನೋಂದಣಿ ಪ್ರಕ್ರಿಯೆ ಇದೀಗ ವಿಧಾನಸಭೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಆಸ್ತಿ ನೋಂದಣಿಗೆ ಲಂಚ ಪಡೆಯಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದರೆ, ಈ ಆರೋಫವನ್ನು ತಳ್ಳಿ ಹಾಕಿದ ಡಿಸಿಎಂ ಡಿ.ಕೆ.. ಶಿವಕುಮಾರ್ ಅವರು ಈ ವ್ಯವಸ್ಥೆ ದೇಶಕ್ಕೇ ಮಾದರಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ಇ ಖಾತಾ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ತಮ್ಮ ಮನೆಯ ಆಸ್ತಿಯನ್ನು ತಮ್ಮ ಹೆಸರಿಗೆ ನೋಂದಾಯಿಸಲು 10 ಸಾವಿರ ಲಂಚ ಪಡೆಯದೇ ಯಾರೂ ಕೂಡ ಈ ದಾಖಲೆಯನ್ನು ತಯಾರಿ ಮಾಡಿ ಕೊಡುವುದಿಲ್ಲವೆಂದು ಸವಾಲು ಹಾಕಿದರು. ಮಧ್ಯದಲ್ಲೇ ಮೊಟಕಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನಾವು ಮಾಡಿರುವ ಪ್ರಕ್ರಿಯೆ ಈ ದೇಶಕ್ಕೆ ಮಾದರಿಯಾಗಿದ್ದು, ನೀವೇ ಕೇಂದ್ರ ಸರ್ಕಾರದಿಂದ ಇದನ್ನು ಪ್ರಶಂಸಿ ಪ್ರಶಸ್ತಿ ನೀಡಿದ್ದೀರಿ. ಈಗ ಇಲ್ಲಿ ಟೀಕೆ ಮಾಡುತ್ತಿರುವುದು ಎಷ್ಟು ಸರಿ. 10 ಸಾವಿರ ಹಣ ಕೇಳಿದವರ ಪಟ್ಟಿಯನ್ನು ನೀಡಿ ಎಂದರು. ಕೆಲವು ವೇಳೆ ತಾಂತ್ರಿಕ ಸಮಸ್ಯೆಯಿಂದ ಇ ಖಾತೆ ನೀಡುವಲ್ಲಿ ವಿಳಂಬವಾಗಿದೆ ಎಂದರು.

ಈ ವೇಳೆ ಸದಸ್ಯ ಸುನೀಲ್ ಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಹಲವಾರು ಜನರು ಹಣ ಬೇಡಿಕೆ ಇಟ್ಟಿದ್ದವರು ಇದ್ದಾರೆ. ಡಿ.ಕೆ.ಶಿವಕುಮಾರ್ ಅವರು ವಿಮಾನದಲ್ಲೇ ಓಡಾಡುತ್ತಿರುವುದರಿಂದ ಅವರಿಗೆ ಗೊತ್ತಾಗುತ್ತಿಲ್ಲ ಎಂದರು.

Tags:

error: Content is protected !!