Kagawad

ಗ್ರಾಮದ ಉದ್ಧಾರ ಆದರೆ ದೇಶದ ಉದ್ಧಾರವಾಗಲಿದೆ ಕಾಗವಾಡದ ಪ್ರಾಚಾರ್ಯ ಡಾಕ್ಟರ್ ಎಸ್.ಪಿ ತಳವಾರ್.

Share

ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿ ಅವರು ದೇಶದ ಜನತೆಗೆ “ಗ್ರಾಮದ ಉದ್ಧಾರವೇ ದೇಶದ ಉದ್ಧಾರ” ಎಂದು ನೀಡಿರುವ ಸಂದೇಶವನ್ನು ಕಾಗವಾಡದ ಶಿವಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಅನುಸರಿಸುತ್ತಿದ್ದಾರೆ ಎಂದು ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಪಿ.ತಳವಾರ್ ಹೇಳಿದರು.

ಸೋಮವಾರ ಸಂಜೆ ಶಿವಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ೧ ಮತ್ತು ೨ರ ವಿದ್ಯಾರ್ಥಿಗಳು “ನನ್ನ ಭಾರತಕ್ಕಾಗಿ ಯುವಕರು” ಎಂಬ ಘೋಷವಾಕ್ಯವನ್ನು ಗಮನದಲ್ಲಿ ಇಟ್ಟುಕೊಂಡು ದತ್ತು ಗ್ರಾಮ ಶೇಡಬಾಳ ಸ್ಟೇಷನನಲ್ಲಿ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಇದರ ಉದ್ಘಾಟನೆ ನೆರವೇರಿಸಿ ಪ್ರಾಚಾರ್ಯರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಶಿವಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿ ಹಾಗೂ ನಿವೃತ್ತ ಪ್ರಾಚಾರ್ಯ ಬಿ. ಎ. ಪಾಟೀಲ ಮಾತನಾಡಿ, ಶಿವಾನಂದ ಮಹಾವಿದ್ಯಾಲಯದಲ್ಲಿ ಸನ್ ೧೯೭೭ರಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸ್ಥಾಪನೆಯಾಗಿದ್ದು, ಕಳೆದ ೪೦ ವರ್ಷಗಳಲ್ಲಿ ಮಹಾವಿದ್ಯಾಲಯದ ವ್ಯಾಪ್ತಿಗೆ ಬರುವ ಅನೇಕ ಗ್ರಾಮಗಳಲ್ಲಿ ಎನ್.ಎಸ್.ಎಸ್ ವಿದ್ಯಾರ್ಥಿಗಳು ಶಿಬಿರಗಳನ್ನು ಹಮ್ಮಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ ಎಂದರು.
ಶೇಡಬಾಳ ಸ್ಟೇಷನನಲ್ಲಿ ಏಳು ದಿನಗಳ ಕಾಲ ಸ್ವಚ್ಛತಾ ಕಾಮಗಾರಿಗಳನ್ನು ಹಮ್ಮಿಕೊಂಡು ಗ್ರಾಮದ ಅಭಿವೃದ್ಧಿಗೆ ಸಹಕರಿಸಲಿದ್ದಾರೆ. ಈ ಕಾರಣದಿಂದ ಗ್ರಾಮದ ಎಲ್ಲಾ ಚುನಾಯಿತ ಸದಸ್ಯರು ಹಾಗೂ ಮುಖಂಡರು ಸಹಕರಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಸುಕುಮಾರ ಬನ್ನೂರೆ ಮಾತನಾಡಿ, ಶಿವಾನಂದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಅನೇಕ ಗ್ರಾಮಗಳಲ್ಲಿ ಶಿಬಿರಗಳನ್ನು ಹಮ್ಮಿಕೊಂಡು ಸಹಕಾರ ನೀಡಿದ್ದಾರೆ. ಇಲ್ಲಿನ ಶಿಬಿರಕ್ಕೂ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಪ್ರಾರಂಭದಲ್ಲಿ ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾದ ಡಾ. ಚಂದ್ರಶೇಖರ ವೈ., ಡಾ. ಅಶೋಕ ಪಾಟೀಲ, ಪ್ರಾಚಾರ್ಯ ಡಾ. ಎಸ್. ಪಿ. ತಳವಾರ, ನಿವೃತ್ತ ಪ್ರಾಚಾರ್ಯರು ಹಾಗೂ ಆಡಳಿತಾಧಿಕಾರಿ ಕ್ಯಾಪ್ಟನ್ ವಿ. ಎಸ್. ತುಗಶೆಟ್ಟಿ, ಪ್ರೊ. ಎ. ಎಂ. ಜಕ್ಕಣ್ಣವರ, ಪ್ರೊ. ಬಿ. ಡಿ. ಧಾಮಣ್ಣವರ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಸಮಾರಂಭದಲ್ಲಿ ಗ್ರಾಮದ ಹಿರಿಯರಾದ ಅಪ್ಪಯ್ಯ ಹಿರೇಮಠ, ಪಿ.ಕೆ.ಪಿ.ಎಸ್ ಸದಸ್ಯ ಶೀತಲ ಹೇರಲೆಕರ್, ಪ್ರಮೋದ್ ಖೋತ, ಫಾರುಖ್ ಅಲಾಸ್ಕರ್, ತುಕಾರಾಮ ಹೂನಕಾಂಬಳೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಾತಪುತೆ, ಸಂದೇಶ ಅಲಾಸೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:

error: Content is protected !!