Dharwad

ಧಾರವಾಡದಲ್ಲಿ ನಿಲ್ಲುತ್ತಿಲ್ಲ ತ್ಯಾಜ್ಯ ವಿಲೇವಾರಿ ಸಮಸ್ಯೆ…

Share

ಧಾರವಾಡ ಜನ್ನತ ನಗರದ ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಕಸದ ಗುಡ್ಡಕ್ಕೆ ಬಿದ್ದ ಬೆಂಕಿಯಿಂದ ಹೊರ ಬರುತ್ತಿರುವ ವಿಷಮ ಹೋಗೆ ಸದ್ಯಕ್ಕೆ ನಿಲ್ಲಯವ ಲಕ್ಷಣಗಳು ಕಾಣುತ್ತಿಲ್ಲ. ಕಳೆದೆ ಮೂರು ದಿನಗಳಿಂದ ಆಗ್ಗಾಗ್ಗೆ ಕಸದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು, ವಿಷಮ ಬೆಂಕಿಯ ಹೋಗೆಯಿಂದ ಸ್ಥಳೀಯ ನಿವಾಸಿಗಳು ಆತಂಕದಲ್ಲಿ ಜೀವ ನಡೆಸುವಂತಾಗಿದೆ. ನಿತ್ಯವು ಜಿಲ್ಲಾಡಳಿತ, ಪಾಲಿಕೆ ಸೇರಿ ಉಸ್ತುವಾರಿ ಸಚಿವರ ವಿರುದ್ಧ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಕಳೆದ ನಾಲ್ಕೈದು ದಶಕಳಿಂದ ನಗರದ ಆಚ್ಚೆಗೆ ಇದ್ದ ಧಾರವಾಡ ಜನ್ನತ ನಗರದ ತ್ಯಾಜ್ಯ ವಿಲೇವಾರಿ ಘಟಕ ಈಗ ನಗರದ ಮಧ್ಯ ಭಾಗದಲ್ಲಿದ್ದು, ಈ ತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಕಸದ ಗುಡ್ಡಕ್ಕೆ ಕಳೆದ ಮೂರು ದಿನಗಳಿಂದ ಪದೇ ಪದೇ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿ ಹೋಗಿದ ಕೆಲವೇ ಗಂಟೆಗಳಲ್ಲಿ ಮತ್ತೆ ಮತ್ತೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು, ಜನ ವಿಷಮ ಹೋಗೆಯಿಂದ ಹೈರಾಣಾಗಿದ್ದಾರೆ. ಅಷ್ಟೇ ಅಲ್ಲದೆ ವಯೋ ವೃದ್ಧರು ಅಸ್ತಮಾ, ಹೃದಯ ಸಮಸ್ಯೆ ಜತೆಗೆ ಉಸಿರಾಟ ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಅನೇಕ ಬಾರಿ ಸ್ಥಳೀಯ ನಿವಾಸಿಗಳು ಬೀದಿಗೆ ಇಳಿದು ಪ್ರತಿಭಟನೆ ಮಾಡಿದರು ಸಹ ಜಿಲ್ಲಾಡಳಿತವಾಗಲಿ, ಪಾಲಿಕೆಯಾಗಲಿ ಹಾಗೂ ಉಸ್ತುವಾರಿ ಸಚಿವರು ತಲೆಕೆಡಿಸಿಕೊಳ್ಳದೇ ಇರುವುದು ಇಲ್ಲಿಯ ಜನರ ಶಾಪಕ್ಕೆ ಕಾರಣವಾಗಿದೆ

ಕಳೆದ ದಿನ ಮಧ್ಯಾಹ್ನ ಹೊತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ನಂದಿಸಿದ್ದರು. ಆದರೆ ತಡ ರಾತ್ರಿ ಮತ್ತೆ ಕಿಡಗೇಡಿಗಳು ಬೆಂಕಿ ಹಚ್ಚಿದ್ದು, ಮತ್ತೆ ವಿಷಮ ಹೋಗೆ ಜನ್ನತ ನಗರ, ಹೊಸಯಲ್ಲಾಪುರ, ಟೋಲ ನಾಕ್, ಸೇರಿ ಐದಕ್ಕೂ ಹೆಚ್ಚು ನಗರಗಳಿಗೆ ಪಸರಿಸಿದ್ದು, ಜನ ಈಗ ಮತ್ತೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೀದಿಗೆ ಇಳಿಯುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಈ ತ್ಯಾಜ್ಯ ವಿಲೇವಾರಿ ಸ್ಥಳಾಂತರ ಮಾಡಿ ವಿಷಮ ಹೋಗೆಯಿಂದ ಇಲ್ಲಿ ಜನರ ನಿರಾಳತೆಗೆ ಜಿಲ್ಲಾಡಳಿತ, ಪಾಲಿಕೆ ಸೇರಿ ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗುತ್ತಾರಾ ಕಾದು ನೋಡಬೇಕಾಗಿದೆ.

Tags:

error: Content is protected !!