ನಿಪ್ಪಾಣಿಯ ಶ್ರೀ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಜೊಲ್ಲೆ ದಂಪತಿ ಮಾರ್ಗದರ್ಶನದಲ್ಲಿ ಮಾ.11ರಿಂದ ಆರು ದಿನಗಳ ಕಾಲ ಬೃಹತ್ ಕೃಷಿ ಉತ್ಸವ ಆಯೋಜಿಸಿದ್ದು, 2 ಲಕ್ಷ ಜನ ಭಾಗವಹಿಸಲಿದ್ದಾರೆ ಎಂದು ಜೊಲ್ಲೆ ಸಮೂಹದ ಉಪಾಧ್ಯಕ್ಷ ಬಸವ ಪ್ರಸಾದ ಜೊಲ್ಲೆ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾರ್ಚ 11 ರಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ಕಣೇರಿ ಸಿದ್ದಗಿರಿಮಠದ ಶ್ರೀ ಅದೃಷ್ಟ ಕಾಡಸಿದ್ದೇಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಡೊಳ್ಳಿನ ಸ್ಪರ್ಧೆ, ಕೊಲ್ಲಾಪುರದ ಭಜನ್ ರಾಕ್ಸ್ ಸಂಘದಿಂದ ಅಧುನಿಕ ಸ್ವರೂಪದ ಭಜನೆಗಳು, ಬೆಂಗಳೂರಿನ ಸೈಕಿಕ್ ಸಿಬಲಿಂಗ್ಸ್ ವತಿಯಿಂದ ಮನೋಕ್ರೀಡೆಗಳು ನಡೆಯಲಿವೆ. 12 ರಂದು ಕಬ್ಬು ಬೆಳೆ ಕುರಿತ ಕಾರ್ಯಾಗಾರ, ಮರ್ದಾನಿ
ಸ್ಪರ್ಧೆಯ ಗ್ಯಾಂಡ್ ಫಿನಾಲೆ, ಹಾರ್ಮನಿ ಆಯೋಜಿಸಲಾಗಿದೆ,” ಎಂದರು.

13 ರಂದು ಅಧುನಿಕ ಪದ್ಧತಿಯಲ್ಲಿ ಕಬ್ಬು ಬೆಳೆಯುವ ಬಗ್ಗೆ ಉಪನ್ಯಾಸ, ಶ್ವಾನ ಸ್ಪರ್ಧೆ, ಸಂತರ ಅಭಂಗ ಆಧಾರಿತ ಸಂಗಿತ ಕಾರ್ಯಕ್ರಮ, 14 ರಂದು ರೈತರಿಗೆ ಅಗ್ರಿ ಫೈನಾನ್ಸ್ ಸೆಮಿನಾರ್, ಹೊಸದಿಲ್ಲಿಯ
ಸಂಗೀತ ಕಾರ್ಯಕ್ರಮ, ಗೋಕಾಕ್‌ನ ಜನಪದ ಚಿಲಿಪಿಲಿ ರಸಮಂಜರಿ, 15 ರಂದು ಕೃಷಿ ಪಂಡಿತರಿಂದ ಸಮಗ್ರ ಕೃಷಿ ಕುರಿತು ಪದ್ಧತಿ ಉಪನ್ಯಾಸ, ಹಲಗಿ ಸ್ಪರ್ಧೆ, ಜಮಖಂಡಿಯ ಸಪ್ತಸ್ವರ ಲೈನ್ಸ್ ಅವರಿಂದ ಕನ್ನಡ ಜನಪದ, ಪುಣೆಯ ಕಲಾವಿದರಿಂದ ಲಾವಣಿ ನೃತ್ಯ ನಡೆಯಲಿದೆ. 16 ರಂದು ಟಗರಿನ ಕಾಳಗ, ಗೋವಾದ ಸಾಶ್ ಬ್ಯಾಂಡ್ ತಂಡದ ರಸಮಂಜರಿಯೊಂದಿಗೆ ಕೃಷಿ ಉತ್ಸವಕ್ಕೆ `ತೆರೆಬಿಳಲಿದೆ,” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಖಾನೆ ಅಧ್ಯಕ್ಷ ಎಂ.ಪಿ. ಪಾಟೀಲ, ಸಂಚಾಲಕ ಜಯಕುಮಾರ ಖೋತ್, ಜಯವಂತ ಭಾಟಲೆ, ರಾಜು ಗುಂದೇಶಾ, ಸಮಿತ್ ಸಾಸನೆ, ಸುನೀಲ ಪಾಟೀಲ, ರಾವಸಾಹೇಬ್ ಫರಾಳೆ, ರಮೇಶ ಪಾಟೀಲ, ಸುಹಾಸ ಗೂಗೆ, ಪ್ರವೀಣ ಶಿಂಧೆ, ಕಾರ್ಯಕ್ರಮ ನಿರ್ದೇಶಕ ವಿಜಯ ರಾವುತ್, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾಂವೆ, ಕಚೇರಿ ಅಧೀಕ್ಷಕ ಗಜಾನನ ರಾಮನಕಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
