Hukkeri

ಐದು ದಿನಗಳ ಲಕ್ಷ್ಮಿ ದೇವಿ ಜಾತ್ರೆ ಸಾಂಗವಾಗಿ ಜರುಗಲಿ – ಚಂದ್ರಶೇಖರ ಮಹಾಸ್ವಾಮಿಗಳು.

Share

ಹುಕ್ಕೇರಿ ನಗರದಲ್ಲಿ ಇಂದಿನಿಂದ ಪ್ರಾರಂಭವಾದ ಲಕ್ಷ್ಮಿ ದೇವಿ ಜಾತ್ರೆ ಐದು ದಿನಗಳ ಕಾಲ ಸಾಂಗವಾಗಿ ಜರುಗಲಿವೆಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಹೇಳಿದರು.

ಪ್ರತಿ ಮೂರು ವರ್ಷಕ್ಕೊಮ್ಮೆ ಜರಗುವ ಹುಕ್ಕೇರಿ ಗ್ರಾಮ ದೇವತೆ ಲಕ್ಷ್ಮಿ ದೇವಿ ಜಾತ್ರೆ ಇಂದು ಮುಂಜಾನೆ ಅರ್ಚಕರಾದ ಬಡಿಗೇರ ಬಂಧುಗಳು ಮತ್ತು ಹಕ್ಕುದಾರರು ಹಾಗೂ ನಗರದ ಗಣ್ಯರು ವಿಧಿ ವಿಧಾನ ಗಳೊಂದಿಗೆ ಪೂಜೆ ಸಲ್ಲಿಸಿ ಉಯ್ಯಾಲೆ ಆಡುವ ಮೂಲಕ ದೇವಿ ಮೂರ್ತಿಗೆ ದ್ಯಾಮವ್ವಾ ಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪಣೆ ಮಾಡಿದರು.

ನಂತರ ಚಂದ್ರಶೇಖರ ಮಹಾಸ್ವಾಮಿಗಳು ದೇವಿಗೆ ಉಡಿ ತುಂಬಿ ಪೂಜೆ ಸಲ್ಲಿಸಿ ಮಾತನಾಡಿ ಇಂದಿನಿಂದ ಐದು ದಿನಗಳ ಕಾಲ ಜರಗಲಿರುವ ಲಕ್ಷ್ಮಿ ದೇವಿ ಜಾತ್ರೆಯು ಶಾಂತ ರೀತಿಯಿಂದ ಎಲ್ಲ ಸಮೂದಾಯದ ಜನರು ಜಾತ್ರೆಯ ಯಶಸ್ವಿಗೆ ಶ್ರಮಿಸಲಿ ಎಂದರು
ನಂತರ ನಗರದ ಲಕ್ಷ್ಮಿ ಮಂದಿರಕ್ಕೆ ತೇರಳಿ ಪೂಜೆ ಸಲ್ಲಿಸಿ ಜಾತ್ರೆ ಪ್ರಾರಂಭಕ್ಕೆ ನಾಂದಿ ಹಾಡಲಾಯಿತು.

ಇಂದು ರಾತ್ರಿ ದೇವಿಯ ಮೂರ್ತಿಯನ್ನು ಉಯ್ಯಾಲೆ ಮೂಲಕ ಭಂಡಾರದ ಓಕಳಿಯೊಂದಿಗೆ ಹಕ್ಕುದಾರರ ಮನೆಗೆ ತೇರಳಿ ಉಡಿ ತುಂಬಿಸುವ ಕಾರ್ಯ ನಡೆಯುತ್ತದೆ ಕಾರಣ ಯಾವದೇ ಅಹಿತಕರಣ ಘಟನೆ ಜರುಗದಂತೆ ಗೋಕಾಕ ಡಿ ಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ ನೇತೃತ್ವದಲ್ಲಿ ಕ್ವೀಕ್ ಆಕ್ಸನ್ ಫೋರ್ಸ, ಕೆ ಎಸ್ ಆರ್ ಪಿ ಮತ್ತು ಡಿ ಆರ್ ತುಕಡಿಗಳ ಸುಮಾರು ಮೂರ ನೂರು ಪೋಲಿಸರು ಸೂಕ್ಷ್ಮ ಪ್ರದೇಶಗಳಲ್ಲಿ ಮಾರ್ಚ ಫಾಸ್ಟ ಮಾಡುವ ಮೂಲಕ ಎಚ್ಚರಿಕೆ ನೀಡಿದರು.

Tags:

error: Content is protected !!